Friday, December 9, 2022
Google search engine
HomeUncategorizedನ.20 ರಂದು ಅನುಷಾ ಶೆಟ್ಟಿ ಜೊತೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

ನ.20 ರಂದು ಅನುಷಾ ಶೆಟ್ಟಿ ಜೊತೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

ನ.20 ರಂದು ಅನುಷಾ ಶೆಟ್ಟಿ ಜೊತೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

ಟಾಲಿವುಡ್​ ನಟ ನಾಗಶೌರ್ಯ ಶೀಘ್ರದಲ್ಲಿ ಹಸೆಮಣೆ ಏರಲಿದ್ದಾರೆ. ಬೆಂಗಳೂರಿನ ಯುವತಿ ಅನುಷಾ ಶೆಟ್ಟಿ ಜೊತೆ ಇದೇ ತಿಂಗಳ 20ರಂದು ಮದುವೆ ನಡೆಯಲಿದೆ. ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ನಾಗಶೌರ್ಯ ಶೇರ್ ಮಾಡಿದ್ದಾರೆ.

ಈ ಜೋಡಿಯದ್ದು ಪ್ರೇಮ ವಿವಾಹ ಎಂದು ಹೇಳಲಾಗುತ್ತಿದೆ. ಅನುಷಾ ಶೆಟ್ಟಿ ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಜೋಡಿಯ ವಿವಾಹದ ಆಮಂತ್ರಣ ಪತ್ರಿಕೆ ಶೇರ್​ ಆಗುತ್ತಲೇ ನೆಟ್ಟಿಗರ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಪೂರ್ವ ಗೋದಾವರಿ ಜಿಲ್ಲೆಯ ಏಲೂರಿನಲ್ಲಿ ಜನಿಸಿದ ನಾಗ ಶೌರ್ಯ ವಿಜಯವಾಡದಲ್ಲಿ ನೆಲೆಸಿದ್ದರು. ನಂತರ ಅವರ ಕುಟುಂಬ ಹೈದರಾಬಾದ್​ಗೆ ಶಿಫ್ಟ್ ಆಗಿತ್ತು. 2011ರಲ್ಲಿ ‘ಕ್ರಿಕೆಟ್ ಗರ್ಲ್ಸ್ ಮತ್ತು ಬಿಯರ್’ ಚಿತ್ರದ ಮೂಲಕ ನಟನಾಗಿ ಪದಾರ್ಪಣೆ ಮಾಡಿದ ನಾಗಶೌರ್ಯ, ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಪ್ರವೀಣ್ ಸತ್ತಾರು ನಿರ್ದೇಶನದ ಚಂದಮಾಮ ಕಥೆಗಳು ಚಿತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments