Tuesday, December 6, 2022
Google search engine
HomeUncategorizedನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್​: ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ನ್ಯೂಯಾರ್ಕ್​ನ ಬೀದಿಗಳಲ್ಲಿ ಕ್ಯಾಬ್ ಚಾಲಕನೊಬ್ಬನನ್ನು ಭೇಟಿಯಾಗಿದ್ದ ಆನಂದ್​ ಮಹೀಂದ್ರಾ ಅವರ ಸ್ನೇಹಿತರೊಬ್ಬರು, ಆ ಚಾಲಕ ಭಾರತದ ಬಗ್ಗೆ ಮಾತನಾಡಿರುವ ವಿಡಿಯೋ ಸೆರೆ ಹಿಡಿದಿರುವ ಕುರಿತು ಆನಂದ್​ ಮಹೀಂದ್ರಾ ಹೇಳಿಕೊಂಡಿದ್ದಾರೆ.

ಪ್ರಪಂಚದಾದ್ಯಂತ ಇರುವ ಭಾರತೀಯರ ಬಗ್ಗೆ ಈ ಚಾಲಕ ಅದ್ಭುತವಾದ ವಿಷಯಗಳನ್ನು ಹೇಳಿರುವುದು ವಿಡಿಯೋದಲ್ಲಿ ಕಾಣಬಹುದು. ಭಾರತದ ಕುರಿತು ಇಡಿ ವಿಶ್ವಕ್ಕೆ ಈತ ನೀಡಲು ಹೊರಟಿರುವ ಸಂದೇಶದ ಬಗ್ಗೆ ಕೇಳಿ ಖುಷಿ ಪಡಬಹುದು.

“ಹಲೋ ಸ್ನೇಹಿತರೇ, ಈಗ ಜಗತ್ತನ್ನು ನಡೆಸುತ್ತಿರುವ ಎಲ್ಲಾ ಭಾರತೀಯರಿಗೆ ನಾನು ಈ ಸಂದೇಶವನ್ನು ನೀಡಲು ಬಯಸುತ್ತೇನೆ. ನಿಮಗೆಲ್ಲಾ ನಮಸ್ಕಾರ. ಭಾರತ ಅದ್ಭುತವಾಗಿರುವ ದೇಶ“ ಎಂದಿದ್ದಾನೆ. ಈ ವಿಡಿಯೋ ನೋಡಿದ ಲಕ್ಷಾಂತರ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದ ಬಗ್ಗೆ ಹೆಮ್ಮೆಯಿಂದ ಬೀಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments