Friday, December 9, 2022
Google search engine
HomeUncategorizedನೈನಿತಾಲ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ ವಿರಾಟ್‌ ಕೊಹ್ಲಿ, ಪತ್ನಿ-ಮಗಳೊಂದಿಗೆ ಸುತ್ತಾಟ

ನೈನಿತಾಲ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ ವಿರಾಟ್‌ ಕೊಹ್ಲಿ, ಪತ್ನಿ-ಮಗಳೊಂದಿಗೆ ಸುತ್ತಾಟ

ನೈನಿತಾಲ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ ವಿರಾಟ್‌ ಕೊಹ್ಲಿ, ಪತ್ನಿ-ಮಗಳೊಂದಿಗೆ ಸುತ್ತಾಟ

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸದ್ಯ ಕ್ರಿಕೆಟ್‌ನಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ. ನ್ಯೂಜಿಲೆಂಡ್‌ ಸರಣಿಯಿಂದ ದೂರ ಉಳಿದಿರೋ ಕೊಹ್ಲಿ, ದೂರದ ನೈನಿತಾಲ್‌ನಲ್ಲಿ ರಜೆಯನ್ನು ಎಂಜಾಯ್‌ ಮಾಡ್ತಿದ್ದಾರೆ. ಪತ್ನಿ ಅನುಷ್ಕಾ ಹಾಗೂ ಮಗಳು ವಮಿಕಾ ಜೊತೆಗೆ ನೈನಿತಾಲ್‌ನಲ್ಲಿ ಕೊಹ್ಲಿ ಸುತ್ತಾಡಿದ್ರು.

ಕುಟುಂಬ ಸಮೇತ ಉತ್ತರಾಖಂಡ ಪ್ರವಾಸ ಕೈಗೊಂಡಿರೋ ವಿರಾಟ್‌, ಅಲ್ಲಿನ ಕೈಂಚಿ ಧಾಮಕ್ಕೂ ಆಗಮಿಸಿದ್ದರು. ಬೆಳಗ್ಗೆ 5.30ಕ್ಕೆಲ್ಲಾ ಕೈಂಚಿ ಧಾಮ್‌ಗೆ ಆಗಮಿಸಿದ ಕೊಹ್ಲಿ ಬಾಬಾ ನಿಬ್ ಕರೋರಿ ಅವರ ಆಶೀರ್ವಾದ ಪಡೆದರು. ಸುಮಾರು ಒಂದು ಗಂಟೆ ಕಾಲ ಕೈಂಚಿ ಧಾಮದಲ್ಲಿ ತಂಗಿದ್ದ ಅವರು, ಅಲ್ಲಿಂದ ಮತ್ತೊಂದು ದೇವಸ್ಥಾಕನಕ್ಕೆ ತೆರಳಿದ್ರು.

ಈ ವೇಳೆ ವಿರಾಟ್ ಕೊಹ್ಲಿ ಕೂಡ ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ದೇವಸ್ಥಾನದ ಮೆಟ್ಟಿಲುಗಳ ಮೇಲೆ ಕುಳಿತು ಸರಳತೆ ಮೆರೆದಿದ್ದಾರೆ. ಕೈಂಚಿ ಧಾಮ್‌ನಲ್ಲಿ ಪೂಜೆ ಸಲ್ಲಿಸಿದ ನಂತರ ವಿರಾಟ್ ಮತ್ತು ಅನುಷ್ಕಾ, ಬಾಬಾ ನಿಬ್ ಕರೋರಿಯ ವಿಗ್ರಹದ ಮುಂದೆ ಕುಳಿತು ಸ್ವಲ್ಪ ಸಮಯ ಧ್ಯಾನ ಕೂಡ ಮಾಡಿದ್ದಾರೆ. ನಂತರ ಅವರು ಬಾಬಾರ ಧುನಿಯ ದರ್ಶನವನ್ನೂ ಪಡೆದರು.

ವಿರಾಟ್ ಮತ್ತು ಅನುಷ್ಕಾ, ನೈನಿತಾಲ್‌ನ ಬೇರೆ ಸ್ಥಳಗಳಿಗೂ ಭೇಟಿ ಕೊಟ್ಟಿದ್ದಾರೆ. ವಿಂಧ್ಯವಾಸಿನಿ, ರಾಧಾ ಕೃಷ್ಣ, ವೈಷ್ಣೋ ದೇವಿ, ಕೈಂಚಿ ಧಾಮ್‌ನಲ್ಲಿರುವ ಹನುಮಾನ್ ದೇವಸ್ಥಾನ ಹೀಗೆ ಹಲವು ಸ್ಥಳಗಳನ್ನು ವೀಕ್ಷಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಈ ಮೂಲಕ ಫಾರ್ಮ್‌ಗೂ ಮರಳಿದ್ದರು. ಆದರೆ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments