Thursday, August 11, 2022
Google search engine
HomeUncategorizedನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಿಗೆ ‌ʼಓಯೋʼ ದಿಂದ ಬಂಪರ್‌ ಆಫರ್

ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಿಗೆ ‌ʼಓಯೋʼ ದಿಂದ ಬಂಪರ್‌ ಆಫರ್

ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಯರಿಗೆ ‌ʼಓಯೋʼ ದಿಂದ ಬಂಪರ್‌ ಆಫರ್

ಆತಿಥ್ಯ ಕ್ಷೇತ್ರದ ಟೆಕ್ ಕಂಪನಿ ಓಯೋ ನೀಟ್ 2022ರ ಅಭ್ಯರ್ಥಿಗಳಿಗಾಗಿ ಆಫರ್‌ ವೊಂದನ್ನು ಪ್ರಕಟಿಸಿದೆ

ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಜುಲೈ 17ರಂದು ಭಾರತದಾದ್ಯಂತ 497 ನಗರಗಳಲ್ಲಿ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. 18 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವರು.

ಮಹಿಳಾ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಿಗೆ ಪರವೂರಿಗೆ ತೆರಳಿದ ಸಂದರ್ಭದಲ್ಲಿ ಹೋಟೆಲ್‌ಗಳಲ್ಲಿ ತಂಗಲು ಶೇಕಡಾ 60 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ.

ರಿಯಾಯಿತಿ ಯೋಜನೆಯು 2022ರಂದು ಜುಲೈ 16 ಮತ್ತು ಜುಲೈ 17 ರಂದು ಎರಡು ದಿನಗಳವರೆಗೆ ಮಾನ್ಯವಾಗಿರುತ್ತದೆ ಎಂದು ಕಂಪನಿ ಹೇಳಿದೆ.

ಈ ರಿಯಾಯಿತಿಯನ್ನು ಪಡೆಯಲು ಓಯೋ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ, ಪರೀಕ್ಷಾ ಕೇಂದ್ರದ ಬಳಿಯ ಅರ್ಹ ಹೋಟೆಲ್‌ನಲ್ಲಿ ಕಂಡುಕೊಳ್ಳಲು ನಿಯರ್ ರೆಡ್ ಐಕನ್ ಮೇಲೆ ಕ್ಲಿಕ್ ಮಾಡಿ, ಕೂಪನ್ ಕೋಡ್ ‘NEETJF’ ಅನ್ನು ಆಯ್ಕೆ ಮಾಡಬೇಕು. ನಂತರ ಬುಕ್ ಮಾಡಿ ಮೊತ್ತ ಪಾವತಿಸಬೇಕು.

ಅಭ್ಯರ್ಥಿಗಳು ಬುಕಿಂಗ್ ಮಾಡಲ್ಪಟ್ಟ ಹೋಟೆಲ್‌ಗಳಲ್ಲಿ ವೈ- ಫೈ ಮತ್ತು ಎಸಿ ಸೌಲಭ್ಯಗಳನ್ನು ಹೊಂದಿರುತ್ತಾರೆ ಎಂದು ಓಯೋ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments