Thursday, August 11, 2022
Google search engine
HomeUncategorizedನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿದೇವತೆಯ ಆಕ್ಷೇಪಾರ್ಹ ಚಿತ್ರ; ಭುಗಿಲೆದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿದೇವತೆಯ ಆಕ್ಷೇಪಾರ್ಹ ಚಿತ್ರ; ಭುಗಿಲೆದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿದೇವತೆಯ ಆಕ್ಷೇಪಾರ್ಹ ಚಿತ್ರ; ಭುಗಿಲೆದ್ದ ಹಿಂದೂ ಕಾರ್ಯಕರ್ತರ ಆಕ್ರೋಶ

‘ದಿ ವೀಕ್’ ನಿಯತಕಾಲಿಕೆಯಲ್ಲಿ ಶಿವ ಮತ್ತು ಕಾಳಿ ದೇವತೆಯ ಆಕ್ಷೇಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂಬ ಕಾರಣಕ್ಕೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿದ್ದು ನಿಯತಕಾಲಿಕೆಯ ಪ್ರತಿಗಳಿಗೆ ಬೆಂಕಿ ಹಚ್ಚಿ ತಮ್ಮ ಪ್ರತಿಭಟನೆ ದಾಖಲಿಸಿದ್ದಾರೆ.

ಜುಲೈ 24ರಂದು ವಿವೇಕ್ ದೆಬ್ರೋಯ್ ಎಂಬವರ ಲೇಖನದ ಜೊತೆಯಲ್ಲಿ ಈ ಆಕ್ಷೇಪಾರ್ಹ ಚಿತ್ರ ಪ್ರಕಟಿಸಲಾಗಿದೆ ಎಂದು ಹೇಳಲಾಗಿದ್ದು, ಹೀಗಾಗಿ ನಿಯತಕಾಲಿಕೆಯ ಪ್ರತಿಗಳನ್ನು ಸುಟ್ಟು ಹಾಕಿದ ಬಜರಂಗದಳ ಕಾರ್ಯಕರ್ತರು ಸಂಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇದರ ಮಧ್ಯೆ ಉತ್ತರ ಪ್ರದೇಶ ರಾಜ್ಯ ಬಿಜೆಪಿ ಘಟಕದ ಮಾಜಿ ಉಪಾಧ್ಯಕ್ಷ ಪ್ರಕಾಶ್ ಶರ್ಮಾ ನಿಯತಕಾಲಿಕೆಯ ಸಂಪಾದಕರು ಮತ್ತು ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿದ್ದು, ಪತ್ರಿಕೆಯ ಅಂಕಣಕಾರರಾಗಿದ್ದ ವಿವೇಕ್ ದೆಬ್ರೋಯ್ ಸಹ ಈ ಬೆಳವಣಿಗೆ ಬಳಿಕ ನಿಯತಕಾಲಿಕೆಯೊಂದಿಗೆ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments