Wednesday, August 17, 2022
Google search engine
HomeUncategorizedನಾವು 4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದೆವು: ಪ್ರವೀಣ್ ಹತ್ಯೆ ಖಂಡಿಸಿದ ರಾಜಸ್ಥಾನ ಸಿಎಂ ಗೆಹ್ಲೋಟ್

ನಾವು 4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದೆವು: ಪ್ರವೀಣ್ ಹತ್ಯೆ ಖಂಡಿಸಿದ ರಾಜಸ್ಥಾನ ಸಿಎಂ ಗೆಹ್ಲೋಟ್

ನಾವು 4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದೆವು: ಪ್ರವೀಣ್ ಹತ್ಯೆ ಖಂಡಿಸಿದ ರಾಜಸ್ಥಾನ ಸಿಎಂ ಗೆಹ್ಲೋಟ್

ನವದೆಹಲಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿದ್ದಾರೆ. 48 ಗಂಟೆಯಾದರೂ ಆರೋಪಿಗಳು ಕಂಬಿ ಹಿಂದೆ ಹೋಗಿಲ್ಲ. ನಾವು 4 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದೆವು ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. 48 ಗಂಟೆಗಳ ನಂತರವೂ ಆರೋಪಿಗಳು ಇನ್ನೂ ಕಂಬಿಯ ಹಿಂದೆ ಬಿದ್ದಿಲ್ಲ. ಉದಯಪುರದಲ್ಲಿ ರಾಜಸ್ಥಾನ ಪೊಲೀಸರು ಕನ್ಹಯ್ಯಾಲಾಲ್ ಹತ್ಯೆ ಆರೋಪಿಗಳನ್ನು 4 ಗಂಟೆಯೊಳಗೆ ಬಂಧಿಸಿದ್ದರು.

ದುಃಖದ ಸಮಯದಲ್ಲಿ ಅವರ ಕುಟುಂಬವನ್ನು ಬೆಂಬಲಿಸಲು ನಮ್ಮ ಸರ್ಕಾರವು ಕನ್ಹಯ್ಯಾ ಲಾಲ್ ಅವರ ಇಬ್ಬರು ಪುತ್ರರಿಗೂ ಸರ್ಕಾರಿ ಉದ್ಯೋಗ, 50 ಲಕ್ಷ ರೂಪಾಯಿ ಪರಿಹಾರ ನೀಡಿದೆ. ಕರ್ನಾಟಕ ಸರ್ಕಾರವು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments