Thursday, August 11, 2022
Google search engine
HomeUncategorizedನಾಯಿ ಮರಿಗಳಿಗೆ ಹಾಲುಣಿಸಿದ ಹಸು; ಇಂತದ್ದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯವೆಂದ ನೆಟ್ಟಿಗರು

ನಾಯಿ ಮರಿಗಳಿಗೆ ಹಾಲುಣಿಸಿದ ಹಸು; ಇಂತದ್ದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯವೆಂದ ನೆಟ್ಟಿಗರು

ನಾಯಿ ಮರಿಗಳಿಗೆ ಹಾಲುಣಿಸಿದ ಹಸು; ಇಂತದ್ದು ಭಾರತದಲ್ಲಿ ಮಾತ್ರ ನಡೆಯಲು ಸಾಧ್ಯವೆಂದ ನೆಟ್ಟಿಗರು

ಹಿಂದೂ ಧರ್ಮದಲ್ಲಿ ಗೋವನ್ನು ಪೂಜಿಸಲಾಗುತ್ತದೆ ಮತ್ತು ತಾಯಿ ರೂಪದಲ್ಲಿ ಪರಿಗಣಿಸಲಾಗುತ್ತದೆ. ಗೋ ಮಾತಾ ಎಂದೇ ಕರೆಯಲಾಗುತ್ತದೆ. ಹಸುವಿನ ಹಾಲು ಹತ್ತಾರು ಜೀವಿಗಳನ್ನು ಪೋಷಿಸುತ್ತದೆ. ಇತ್ತೀಚೆಗೆ ಹಸುವೊಂದು ನಾಯಿ ಮರಿಗಳಿಗೆ ಹಾಲುಣಿಸುವ ವಿಡಿಯೋ ವೈರಲ್​ ಆಗಿದೆ.

ಐಎಫ್‌ಎಸ್​ ಅಧಿಕಾರಿ ಸುಸಾಂತ ನಂದಾ ಅವರು, ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು. ತಾಯಿ ನಾಯಿಯಿಂದ ದೂರವಾದ ಮರಿಗಳಿಗೆ ಹಸುವು ಹಾಲುಣಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಂಡಿದ್ದಾರೆ.

ನಾಲ್ಕು ಕಂದು ಬಣ್ಣದ ನಾಯಿ ನಾಯಿಮರಿಗಳು ಹಸುವಿನ ಹಾಲು ಕುಡಿಯುವುದನ್ನು ವಿಡಿಯೊದಲ್ಲಿ ಕಾಣಬಹುದು. ಆ ಹಸು, ನಾಯಿ ಮರಿಗಳಿಗೆ ಹಾಲು ನೀಡುತ್ತಾ ಶಾಂತವಾಗಿ ಮಲಗಿದೆ.

ನೆಟ್ಟಿಗರು “ಇದು ಭಾರತದಲ್ಲಿ ಮಾತ್ರ ನಡೆಯುತ್ತದೆ’ ಎಂಬ ಅಭಿಪ್ರಾಯ ಒಪ್ಪಿಕೊಂಡು ಕಾಮೆಂಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments