ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಸವಾರರಿಬ್ಬರ ಸಾವು
ಬೈಕಿಗೆ ನಾಯಿ ಅಡ್ಡ ಬಂದ ವೇಳೆ ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಸವಾರರು ಆಯತಪ್ಪಿ ಬಿದ್ದ ಪರಿಣಾಮ ಇಬ್ಬರೂ ಸಾವನ್ನಪ್ಪಿರುವ ದಾರುಣ ಘಟನೆ ಚಾಮರಾಜನಗರ ತಾಲೂಕಿನ ಮಾದಾಪುರ ಸಮೀಪ ನಡೆದಿದೆ.
ಶಿವಮೂರ್ತಿ ಹಾಗೂ ಮಹಾದೇವಪ್ಪ ಮೃತಪಟ್ಟವರಾಗಿದ್ದು, ಇವರಿಬ್ಬರು ಶುಕ್ರವಾರದಂದು ಬೆಳಿಗ್ಗೆ ಮಹಾದೇಶ್ವರ ಬೆಟ್ಟಕ್ಕೆ ಬುಲೆಟ್ ಬೈಕಿನಲ್ಲಿ ಹೊರಟಿದ್ದರು ಎಂದು ತಿಳಿದು ಬಂದಿದೆ.
ಈ ವೇಳೆ ಮಾದಾಪುರ ಸಮೀಪ ಅವರ ಬೈಕಿಗೆ ನಾಯಿ ಅಡ್ಡ ಬಂದಿದ್ದು, ಶಿವಮೂರ್ತಿ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ವೇಳೆ ಬೈಕ್ ಆಯತಪ್ಪಿ ಬಿದ್ದಿದೆ. ಪರಿಣಾಮ ಶಿವಮೂರ್ತಿ ಸ್ಥಳದಲ್ಲೇ ಮೃತಪಟ್ಟರೆ, ಮಹದೇವಪ್ಪ ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.