Tuesday, September 27, 2022
Google search engine
HomeUncategorizedನಮ್ಮಿಬ್ಬರಿಗೂ ವಯಸ್ಸಾಯ್ತಲ್ಲ ಯಡಿಯೂರಪ್ಪನವರೇ; ಮುಖಾಮುಖಿ ವೇಳೆ ಸಿದ್ದರಾಮಯ್ಯ ಜೋಕ್

ನಮ್ಮಿಬ್ಬರಿಗೂ ವಯಸ್ಸಾಯ್ತಲ್ಲ ಯಡಿಯೂರಪ್ಪನವರೇ; ಮುಖಾಮುಖಿ ವೇಳೆ ಸಿದ್ದರಾಮಯ್ಯ ಜೋಕ್

ನಮ್ಮಿಬ್ಬರಿಗೂ ವಯಸ್ಸಾಯ್ತಲ್ಲ ಯಡಿಯೂರಪ್ಪನವರೇ; ಮುಖಾಮುಖಿ ವೇಳೆ ಸಿದ್ದರಾಮಯ್ಯ ಜೋಕ್

ವಿವಿಧ ಪಕ್ಷಗಳ ನಾಯಕರು ರಾಜಕೀಯ ಸಂದರ್ಭದಲ್ಲಿ ಪರಸ್ಪರರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ. ಕೆಲವೊಮ್ಮೆ ಇದು ಅತಿರೇಕದ ಹಂತಕ್ಕೂ ತಲುಪುವುದಿದೆ. ಆದರೆ ಖಾಸಗಿಯಾಗಿ ಅವರುಗಳು ಆತ್ಮೀಯರಾಗಿ ಇರುತ್ತಾರೆ. ಅಂತವುದೇ ಒಂದು ಘಟನೆಗೆ ಇಂದು ವಿಧಾನಸಭೆ ಸಾಕ್ಷಿಯಾಯಿತು.

ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ವಿಧಾನಸೌಧದ ಮೊಗಸಾಲೆಯಲ್ಲಿ ಇಂದು ಮುಖಾಮುಖಿಯಾಗಿದ್ದು, ಈ ಸಂದರ್ಭದಲ್ಲಿ ಯಡಿಯೂರಪ್ಪನವರು, ಏನು ನೀವು ಕೌನ್ಸಿಲ್ ಗೆ ಹೋಗುತ್ತಿದ್ದೀರಾ ಎಂದು ತಮಾಷೆಯಾಗಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ನಗುಮುಖದಿಂದಲೇ ಉತ್ತರಿಸಿದ ಸಿದ್ದರಾಮಯ್ಯನವರು, ಯಡಿಯೂರಪ್ಪನವರೇ ನಮಗೆ ವಯಸ್ಸಾಯ್ತಲ್ಲ. ಕೌನ್ಸಿಲ್ ಗೆ ನೀವೂ ಹೋಗಲು ಆಗಲ್ಲ. ನಾನು ಹೋಗಲು ಆಗಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಬಳಿಕ ಸಿದ್ದರಾಮಯ್ಯನವರು ವಿಧಾನಸಭಾ ಕಲಾಪಕ್ಕೆ ತೆರಳುವ ವೇಳೆ ಆಕಸ್ಮಿಕವಾಗಿ ಸಿಕ್ಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಕೆಲ ಕ್ಷಣಗಳ ಆತ್ಮೀಯ ಮಾತುಕತೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments