Saturday, April 1, 2023
Google search engine
HomeUncategorizedನನ್ನ ಮೊಮ್ಮಗನಿಗೆ ಈ ವಿಡಿಯೋವನ್ನು ಹೆಮ್ಮೆಯಿಂದ ತೋರಿಸುತ್ತೇನೆ: ಆನಂದ್ ಮಹಿಂದ್ರಾ

ನನ್ನ ಮೊಮ್ಮಗನಿಗೆ ಈ ವಿಡಿಯೋವನ್ನು ಹೆಮ್ಮೆಯಿಂದ ತೋರಿಸುತ್ತೇನೆ: ಆನಂದ್ ಮಹಿಂದ್ರಾ

ನನ್ನ ಮೊಮ್ಮಗನಿಗೆ ಈ ವಿಡಿಯೋವನ್ನು ಹೆಮ್ಮೆಯಿಂದ ತೋರಿಸುತ್ತೇನೆ: ಆನಂದ್ ಮಹಿಂದ್ರಾ

ದೇಸೀ ನೆಟ್ಟಿಗರ ಪಾಲಿನ ಫೇವರಿಟ್ ಆಗಿರುವ ಮಹಿಂದ್ರಾ ಅಂಡ್ ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಸದಾ ತಮ್ಮ ಖಾತೆಗಳಲ್ಲಿ ಆಸಕ್ತಿಕರ ಹಾಗೂ ಸ್ಪೂರ್ತಿಯುತ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ.

ಗಯಾನಾ ದೇಶದ ವಿದೇಶಾಂಗ ಸಚಿವ ಹಗ್ ಟಾಡ್ ಭಾರತದ ಬಗ್ಗೆ ಮೆಚ್ಚಿ ಮಾತನಾಡುತ್ತಿರುವ ವಿಡಿಯೋ ತುಣುಕೊಂದನ್ನು ಇದೀಗ ಆನಂದ್ ಮಹಿಂದ್ರಾ ಶೇರ್‌ ಮಾಡಿದ್ದಾರೆ. ಒಂದು ನಿಮಿಷದ ಈ ಕ್ಲಿಪ್‌ನಲ್ಲಿ ಭಾರತವನ್ನು ಒಂದು ’ಬಹುಪಕ್ಷೀಯ ಸಂಸ್ಥೆ’ ಎಂದು ಟಡ್ ಮೆಚ್ಚಿ ಮಾತನಾಡಿದ್ದಾರೆ.

“ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಾಜೂಕಾದ ವ್ಯವಹಾರಗಳ ಮುಖೇನವೇ 1.3 ಶತಕೋಟಿ ಮಂದಿಯನ್ನು ಸಲಹುತ್ತಿದೆ. 1.3 ಶತಕೋಟಿ ಜನಸಂಖ್ಯೆ ಹೊಂದಿದ್ದರೂ ಸಹ ’ಜಗತ್ತಿಗೆ ನಾವೇನು ಮಾಡಬಹುದು’ ಎಂದು ಹೇಳಬಲ್ಲ ನೀತಿ ಹೊಂದಿರುವ ದೇಶವನ್ನು ಎಲ್ಲಾದರೂ ಕಂಡಿದ್ದೀರಾ?” ಎಂದು ಟಾಡ್ ಈ ಕ್ಲಿಪ್‌ನಲ್ಲಿ ಮಾತನಾಡಿರುವುದನ್ನು ಕೇಳಬಹುದಾಗಿದೆ.

ತಮ್ಮ ಕಿರಿಯ ಮೊಮ್ಮಗನಿಗೆ ಈ ವಿಡಿಯೋವನ್ನು ಹೆಮ್ಮೆಯಿಂದ ತೋರಿಸಿದ್ದಾಗಿ ಮಹಿಂದ್ರಾ ತಿಳಿಸಿದ್ದಾರೆ.

“ಹೊಸ ವಿಡಿಯೋವೇನಲ್ಲ. ನನ್ನ ಇನ್‌ಬಾಕ್ಸ್‌ನಲ್ಲಿ ಬಂದು ಬಿದ್ದಿತ್ತು. ನನ್ನ ಕಿರಿಯ ಮೊಮ್ಮಗನಿಗೆ ಈ ವಿಡಿಯೋವನ್ನು ಹೆಮ್ಮೆಯಿಂದ ತೋರಿಸಿದ್ದೇನೆ. ಭಾರತದ ಕುರಿತು ಜಗತ್ತಿನಾದ್ಯಂತ ಪುಟ್ಟ ಮಕ್ಕಳು ಇದೇ ರೀತಿಯಲ್ಲಿ ಅರ್ಥೈಸಿಕೊಳ್ಳಲಿ ಎಂದು ಆಶಿಸುವೆ. ಪ್ರಗತಿಶೀಲ ಅರ್ಥವ್ಯವಸ್ಥೆ ಎಂಬುದಕ್ಕಿಂತಲೂ ಸಕಾರಾತ್ಮಕ ಬದಲಾವಣೆಗಾಗಿ ಬೆಳೆಯುತ್ತಿರುವ ಶಕ್ತಿ ಎಂದು ಗುರುತಿಸಲಿ,” ಎಂದು ಮಹಿಂದ್ರಾ ಈ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments