Friday, December 9, 2022
Google search engine
HomeUncategorizedನಡುರಸ್ತೆಯಲ್ಲಿ ಜೊಮ್ಯಾಟೋ ಬಾಯ್​ ಡಾನ್ಸ್​: ಡೆಲಿವರಿ ಯಾಕೆ ಲೇಟು ಅಂತ ಗೊತ್ತಾಯ್ತಾ ಎಂದ ನೆಟ್ಟಿಗರು

ನಡುರಸ್ತೆಯಲ್ಲಿ ಜೊಮ್ಯಾಟೋ ಬಾಯ್​ ಡಾನ್ಸ್​: ಡೆಲಿವರಿ ಯಾಕೆ ಲೇಟು ಅಂತ ಗೊತ್ತಾಯ್ತಾ ಎಂದ ನೆಟ್ಟಿಗರು

ನಡುರಸ್ತೆಯಲ್ಲಿ ಜೊಮ್ಯಾಟೋ ಬಾಯ್​ ಡಾನ್ಸ್​: ಡೆಲಿವರಿ ಯಾಕೆ ಲೇಟು ಅಂತ ಗೊತ್ತಾಯ್ತಾ ಎಂದ ನೆಟ್ಟಿಗರು

 

ಇದೀಗ ಎಲ್ಲರಿಗೂ ರೀಲ್ಸ್​ ಮಾಡುವುದು ಎಂದರೆ ಇನ್ನಿಲ್ಲದ ಖುಷಿ. ಅದೇ ರೀತಿ ಜೊಮ್ಯಾಟೋ ಬಾಯ್​ ಒಬ್ಬನು ರೀಲ್ಸ್​ ಮಾಡಲು ನಡುರಸ್ತೆಯಲ್ಲಿ ನಿಂತು ನೃತ್ಯ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ.

ಜೊಮ್ಯಾಟೋ ಡೆಲಿವರಿ ಬಾಕ್ಸ್ ಅನ್ನು ಹೊತ್ತುಕೊಂಡು ಹೋಗುತ್ತಿರುವ ಯುವಕನೊಬ್ಬ ಸ್ಕೂಟರ್ ಅನ್ನು ನಿಲ್ಲಿಸಿ ನಡುರಸ್ತೆಯಲ್ಲಿ ಸುಂದರವಾಗಿ ಹೆಜ್ಜೆ ಹಾಕಿದ್ದು, ಈತನ ನೃತ್ಯಕ್ಕೆ ಜನರು ಮನಸೋತಿದ್ದಾರೆ. 31-ಸೆಕೆಂಡ್​ನ ಈ ವಿಡಿಯೋದಲ್ಲಿ ಯುವಕ ಮಾಡಿರುವ ಡಾನ್ಸ್​ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

ಜೊಮ್ಯಾಟೊದಲ್ಲಿ ಫುಡ್​ ಆರ್ಡರ್​ ಮಾಡಿದ ಸಂದರ್ಭದಲ್ಲಿ ಅದನ್ನು ತಲುಪಿಸಲು ವಿಳಂಬವಾದರೆ ಟ್ರಾಫಿಕ್​ ಜಾಂ ನೆಪ ಹೇಳುವುದು ಸಾಮಾನ್ಯ. ಆದರೆ ಆರ್ಡರ್​ ವಿಳಂಬ ಆಗಲು ಇದೊಂದೇ ಕಾರಣವಲ್ಲ ಎಂದು ಈಗಲಾದರೂ ತಿಳಿಯಿತಾ ಎಂದು ನೆಟ್ಟಿಗರು ಕಮೆಂಟ್​ ಮೂಲಕ ತಮಾಷೆ ಮಾಡಿದ್ದಾರೆ. ತಮಾಷೆ ಏನೇ ಇದ್ದರೂ ವಿಡಿಯೋ ಮಾತ್ರ ಎಲ್ಲರ ಹೃದಯ ಗೆದ್ದಿದೆ.

ಈ ವಿಡಿಯೋ ನೋಡಿದ ಮೇಲೆ ಜೊಮ್ಯಾಟೋ ಕಂಪೆನಿ ಯುವಕನ ವಿರುದ್ಧ ಕ್ರಮ ತೆಗೆದುಕೊಂಡುಬಿಟ್ಟರೆ ಎಂಬ ಭಯ ಜನರಲ್ಲಿ ಕಾಡುತ್ತಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments