Wednesday, August 17, 2022
Google search engine
HomeUncategorizedನಕ್ಕು ನಲಿಸುತ್ತೆ ಈ ಮ್ಯೂಸಿಕಲ್​ ಚೇರ್​ ಆಟ

ನಕ್ಕು ನಲಿಸುತ್ತೆ ಈ ಮ್ಯೂಸಿಕಲ್​ ಚೇರ್​ ಆಟ

ನಕ್ಕು ನಲಿಸುತ್ತೆ ಈ ಮ್ಯೂಸಿಕಲ್​ ಚೇರ್​ ಆಟ

ಮ್ಯೂಸಿಕಲ್​ ಚೇರ್​ ಬಹು ಮಂದಿಗೆ ಇಷ್ಟವಾಗುವ ಮನರಂಜನಾ ಆಟ. ದೊಡ್ಡವರು ಆಯೋಜಿಸುವ ಪಾರ್ಟಿಗಳು ಮಕ್ಕಳ ಹುಟ್ಟುಹಬ್ಬದ ಪಾರ್ಟಿವರೆಗೆ ಮ್ಯೂಸಿಕಲ್​ ಚೇರ್​ ಸಾಮಾನ್ಯವಾಗಿರುತ್ತದೆ.

ಇಬ್ಬರು ಮದುವೆ ಪೂರ್ವ ಸಮಾರಂಭದಲ್ಲಿ ಮ್ಯೂಸಿಕಲ್​ ಚೇರ್​ ಆಡುತ್ತಿದ್ದಾಗ ಕೆಲವು ಅನಿರೀಕ್ಷಿತ ಘಟನೆ ನಡೆದ ವಿಡಿಯೋವೊಂದು ವೈರಲ್​ ಆಗಿದ್ದು, ವಿಡಿಯೋ ಕೊನೆಯಲ್ಲಿ ಒಂದು ಮಹತ್ವದ ಟ್ವಿಸ್ಟ್​ ಕೂಡ ಅಲ್ಲಿದೆ.

10 ನಿಮಿಷಗಳ ಕ್ಲಿಪ್​ನಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಮ್ಯೂಸಿಕಲ್​ ಚೇರ್​ ಆಡುತ್ತಾ ಅಂತಿಮ ಸುತ್ತಿನಲ್ಲಿದ್ದರು. ಉಳಿದಿದ್ದ ಒಂದು ಕುರ್ಚಿಯ ಸುತ್ತಲೂ ಸುತ್ತುತ್ತಿದ್ದರು, ಹಿನ್ನೆಲೆಯಲ್ಲಿ ಮ್ಯೂಸಿಕ್​ ಬರುತ್ತಿತ್ತು. ಆದರೆ, ಮ್ಯೂಸಿಕ್​ ನಿಂತಾಗ ಆ ವ್ಯಕ್ತಿ ಕುರ್ಚಿ ಹಿಡಿಯಲು ಮುಂದಾದ ತಕ್ಷಣ ಮಹಿಳೆ ಅದನ್ನು ಕ್ಷಣಮಾತ್ರದಲ್ಲಿ ಎಳೆದುಕೊಂಡು ಬಂದು ಕುಳಿತುಬಿಟ್ಟಳು.

ಜಾಲತಾಣದಲ್ಲಿ ಹಂಚಿಕೊಂಡ ನಂತರ ವೀಡಿಯೊ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ನೂರಾರು ಹಾಸ್ಯಮಯ ಕಾಮೆಂಟ್​ ಬಂದಿದೆ.‌

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments