Friday, October 7, 2022
Google search engine
HomeUncategorizedದೂರು ಕೊಡಲು ಬಂದ ವ್ಯಕ್ತಿಯ ಮಗಳನ್ನು ಸೆಕ್ಸ್ ಗೆ ಕರೆದ ಪೊಲೀಸ್

ದೂರು ಕೊಡಲು ಬಂದ ವ್ಯಕ್ತಿಯ ಮಗಳನ್ನು ಸೆಕ್ಸ್ ಗೆ ಕರೆದ ಪೊಲೀಸ್

ದೂರು ಕೊಡಲು ಬಂದ ವ್ಯಕ್ತಿಯ ಮಗಳನ್ನು ಸೆಕ್ಸ್ ಗೆ ಕರೆದ ಪೊಲೀಸ್

ಹೊಸಪೇಟೆ: ಪೊಲೀಸ್ ಠಾಣೆಗೆ ದೂರು ನೀಡಲು ಬಂದ ವ್ಯಕ್ತಿಯ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಪ್ರಕರಣ ನಿಮ್ಮ ಪರವಾಗಿ ಮಾಡುತ್ತೇನೆ ಎಂದು ಪೊಲೀಸ್ ಬಲವಂತ ಮಾಡಿದ್ದು, ಕಾಮುಕನ ವಿರುದ್ಧ ದೂರು ನೀಡಲಾಗಿದೆ.

ವಿಜಯನಗರ ಜಿಲ್ಲೆ ಕೊಟ್ಟೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ವಿರುದ್ಧ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ ಆರೋಪದ ಮೇಲೆ ದೂರು ನೀಡಲಾಗಿದ್ದು, ಆತನನ್ನು ಅಮಾನತು ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಬಂಗಾರಕ್ಕನ ಗುಡ್ಡದ ನಿವಾಸಿಯಾಗಿರುವ ಪೊಲೀಸ್ ಸದ್ಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೂರು ನೀಡಲು ಬಂದ ವ್ಯಕ್ತಿಯೊಬ್ಬರ ಪುತ್ರಿಯೊಂದಿಗೆ ಫೋನ್ ನಲ್ಲಿ ಸಂಭಾಷಣೆ ನಡೆಸಿ ನಿನ್ನ ಮೇಲೆ ಮನಸಾಗಿದೆ. ಇಬ್ಬರೂ ಎಲ್ಲಾದರೂ ಸೇರೋಣ ಎಂದು ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಾರೆ. ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಪ್ರಕರಣವನ್ನು ನಿಮ್ಮ ಪರವಾಗಿ ಮಾಡುತ್ತೇನೆ ಎಂದು ಹೇಳಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments