Thursday, August 11, 2022
Google search engine
HomeUncategorizedಥೇಟ್ ಸಿನಿಮಾ ಸ್ಟೋರಿಯಂತಿದೆ ಈ ಅಪರಾಧ ಕೃತ್ಯ…! ಬಂಧನದಿಂದ ಬಚಾವಾಗಲು ತನ್ನಂತಿದ್ದವನನ್ನು ಸುಟ್ಟ..!!

ಥೇಟ್ ಸಿನಿಮಾ ಸ್ಟೋರಿಯಂತಿದೆ ಈ ಅಪರಾಧ ಕೃತ್ಯ…! ಬಂಧನದಿಂದ ಬಚಾವಾಗಲು ತನ್ನಂತಿದ್ದವನನ್ನು ಸುಟ್ಟ..!!

ಥೇಟ್ ಸಿನಿಮಾ ಸ್ಟೋರಿಯಂತಿದೆ ಈ ಅಪರಾಧ ಕೃತ್ಯ…! ಬಂಧನದಿಂದ ಬಚಾವಾಗಲು ತನ್ನಂತಿದ್ದವನನ್ನು ಸುಟ್ಟ..!!

ಸಿನಿಮಾಗಳಲ್ಲಿ ತನ್ನ ಹೋಲಿಕೆ ಇರುವವನನ್ನು ಬಳಸಿಕೊಂಡು ಅಪರಾಧ ಕೃತ್ಯದಿಂದ ಬಚಾವಾಗುವವರನ್ನು ನೋಡಿರುತ್ತೀರಿ. ಅಮೀರ್ ಖಾನ್ ಅಭಿನಯದ ‘ಧೂಮ್ 3’ ಇದೇ ರೀತಿಯ ಕಥಾ ಹಂದರವನ್ನು ಹೊಂದಿತ್ತು. ಆದರೆ ಇಲ್ಲೊಬ್ಬ ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ತನ್ನ ಹೋಲಿಕೆ ಇರುವವನನ್ನು ಕೊಂದು ಸುಟ್ಟು ಹಾಕಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಇಂತಹುದೊಂದು ಪ್ರಕರಣ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನಲ್ಲಿ ನಡೆದಿದ್ದು, ಕಾರ್ಕಳ ತಾಲೂಕು ಮಾಳ ಗ್ರಾಮದ ಸದಾನಂದ ಶೇರೇಗಾರ್ ಎಂಬಾತ ಜಾಗ ಹಾಗೂ ಹಣದ ವಿಚಾರದಲ್ಲಿ ಅವ್ಯವಹಾರ ಎಸಗಿದ್ದು, ಈತನ ವಿರುದ್ಧ ಕೇಸ್ ದಾಖಲಾಗಿತ್ತು. ಹೀಗಾಗಿ ತನ್ನನ್ನು ಪೊಲೀಸರು ಬಂಧಿಸಬಹುದೆಂಬ ಭೀತಿ ಈತನನ್ನು ಕಾಡುತ್ತಿತ್ತು.

ಇದಕ್ಕೆ ಖತರ್ನಾಕ್ ಪ್ಲಾನ್ ಮಾಡಿದ ಆತ ತನ್ನ ಸ್ನೇಹಿತೆ ಶಿಲ್ಪಾ ಎಂಬಾಕೆಯೊಂದಿಗೆ ಸೇರಿಕೊಂಡು ತನ್ನನ್ನೇ ಹೋಲುತ್ತಿದ್ದ ಆನಂದ ದೇವಾಡಿಗ ಎಂಬಾತನನ್ನು ಕೊಲೆ ಮಾಡಿದ್ದ. ಇದಕ್ಕಾಗಿ ನಿತಿನ್ ದೇವಾಡಿಗ ಮತ್ತು ಸತೀಶ್ ದೇವಾಡಿಗ ಎಂಬವರ ಸಹಕಾರವನ್ನು ಪಡೆದಿದ್ದ. ಬಳಿಕ ಶವವನ್ನು ಸದಾನಂದನ ಕಾರಿನಲ್ಲಿಟ್ಟು ಬೆಂಕಿ ಹಚ್ಚಲಾಗಿತ್ತು.

ಸದಾನಂದ ಶೇರೇಗಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಬಿಂಬಿಸಲು ಆರೋಪಿಗಳು ಯತ್ನಿಸಿದ್ದು, ಆದರೆ ಕಾರಿನ ಹೊರಗಡೆ ಪೆಟ್ರೋಲ್ ತಂದಿದ್ದ ಖಾಲಿ ಕ್ಯಾನ್ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಮೂಡಿತ್ತು. ಈಗ ತನಿಖೆ ನಡೆಸಿ ಎಲ್ಲರನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments