Sunday, January 29, 2023
Google search engine
HomeUncategorizedತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ತೆಂಗಿನ ಚಿಪ್ಪಿನಲ್ಲಿ ಚಹಾ ತಯಾರಿ: ವೈರಲ್​ ವಿಡಿಯೋಗೆ ಹುಬ್ಬೇರಿಸಿದ ನೆಟ್ಟಿಗರು

ಹೆಚ್ಚಿನವರ ದೈನಂದಿನ ಜೀವನದಲ್ಲಿ ಚಹ ಅತ್ಯಂತ ಅವಶ್ಯಕವಾದ ಪಾನೀಯವಾಗಿದೆ. ಉತ್ತರಾಖಂಡದ ಫುಡ್ ಬ್ಲಾಗರ್ ಒಬ್ಬರು ‘ತೆಂಗಿನ ಚಹಾ’ ಪಾಕವಿಧಾನವನ್ನು ಹಂಚಿಕೊಂಡಿದ್ದು, ಜನರು ಹುಬ್ಬೇರಿಸುತ್ತಿದ್ದಾರೆ.

ಉತ್ತರಾಖಂಡದ ಹಲ್ದ್ವಾನಿಯ ಆಹಾರ ಬ್ಲಾಗರ್ ಕವಿತಾ ರೈ ಅವರು ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ, ವಿಡಿಯೋದಲ್ಲಿ ತೆಂಗಿನ ಚಿಪ್ಪಿನಲ್ಲಿ ಚಹ ಮಾಡುವ ಪಾಕವಿಧಾನವನ್ನು ನೋಡಬಹುದು.

ಒಲೆಯ ಮೇಲೆ ಸ್ವಚ್ಛ ತೆಂಗಿನ ಚಿಪ್ಪನ್ನು ಇಡುತ್ತಿರುವ ರೈ ಅವರ ಕ್ಲೋಸ್-ಅಪ್ ಶಾಟ್‌ನೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಆಕೆ ಟೀ ಪೌಡರ್​, ನೀರು ಮತ್ತು ಸಕ್ಕರೆಯನ್ನು ಹಾಕಿ ಚಹ ತಯಾರಿಸಿದ್ದನ್ನು ನೋಡಬಹುದು.

ವಿಡಿಯೋ 873k ಲೈಕ್‌ಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಜನರು ಪಾಕವಿಧಾನದ ಬಗ್ಗೆ ಸಾಕಷ್ಟು ಕಮೆಂಟ್​ ಮಾಡುತ್ತಿದ್ದಾರೆ. ತೆಂಗಿನ ಚಿಪ್ಪು ಬಳಸಿ ಮಾಡುವುದು ಅಪಾಯ ಎಂದು ಕೆಲವರು ಸೂಚಿಸಿದ್ದರೆ, ಹಲವರು ಇದಕ್ಕೆ ಭೇಷ್​ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments