ತಾಯಿಯೊಂದಿಗಿನ ಪುಟ್ಟ ಹಿಮಚಿರತೆ ಆಟಕ್ಕೆ ನೆಟ್ಟಿಗರು ಫಿದಾ

ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ಹಂಚಿಕೊಂಡಿದ್ದಾರೆ.
ಹಿಮಾಲಯದ ಸ್ಪಿತಿ ಕಣಿವೆಯ ಕಿಬ್ಬರ್ ಗ್ರಾಮದಲ್ಲಿ IRS ಅಧಿಕಾರಿ ಅಂಕುರ್ ರಾಪ್ರಿಯಾ ಅವರು ವೀಡಿಯೊವನ್ನು ಸೆರೆಹಿಡಿದಿದ್ದಾರೆ. ಪರ್ವೀನ್ ಕಸ್ವಾನ್ ನಂತರ ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ವೀಡಿಯೊದಲ್ಲಿ ಹಿಮಚಿರತೆ ಮರಿಗಳು ಪರ್ವತದಾದ್ಯಂತ ಓಡುತ್ತಿರುವುದನ್ನು ಮತ್ತು ತಮ್ಮ ತಾಯಿ ವಿಶ್ರಾಂತಿ ಪಡೆದ ಪ್ರದೇಶಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ತಾಯಿ ಚಿರತೆಯನ್ನು ನೋಡಿದ ಕೂಡಲೇ ಮರಿಗಳು ಅದರ ಬಳಿ ಓಡುತ್ತವೆ.