Sunday, March 26, 2023
Google search engine
HomeUncategorizedತರಕಾರಿಯ ಸಿಪ್ಪೆ, ತಿರುಳನ್ನು ಎಸೆಯದೆ ಹೀಗೆ ಬಳಸುವುದು ಆರೋಗ್ಯಕರ

ತರಕಾರಿಯ ಸಿಪ್ಪೆ, ತಿರುಳನ್ನು ಎಸೆಯದೆ ಹೀಗೆ ಬಳಸುವುದು ಆರೋಗ್ಯಕರ

ತರಕಾರಿಯ ಸಿಪ್ಪೆ, ತಿರುಳನ್ನು ಎಸೆಯದೆ ಹೀಗೆ ಬಳಸುವುದು ಆರೋಗ್ಯಕರ

ತರಕಾರಿ ಮತ್ತು ಹಣ್ಣು ಹೆಚ್ಚು ಹೆಚ್ಚು ಸೇವಿಸಿ ಅಂತ ಎಲ್ಲಾ ವೈದ್ಯರ ಕಿವಿಮಾತು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ವೈದ್ಯರು ಈ ಮಾತನ್ನು ಪ್ರತಿಸಲವೂ ಹೇಳೇ ತೀರುತ್ತಾರೆ. ಪೋಷಕಾಂಶಗಳ ಆಗರ ತರಕಾರಿ.

ತರಕಾರಿಯ ಮಹತ್ವ ಎಲ್ಲರಿಗೂ ತಿಳಿದೇ ಇದೆ. ಆದರೆ ತರಕಾರಿಯ ಸಿಪ್ಪೆ ಹಾಗೂ ತಿರುಳಿನ ಮಹತ್ವ ಅರಿಯದೆ ಅದೆಷ್ಟೋ ಜನ ಅದನ್ನು ಕಸದ ಪಾಲು ಮಾಡುತ್ತಿದ್ದಾರೆ.

ಪಡವಲಕಾಯಿಯ ಒಳಗಿರುವ ತಿರುಳು ಹಾಗೂ ಎಳೆಯ ಬೀಜವನ್ನು ಮಸಾಲೆಯೊಂದಿಗೆ ರುಬ್ಬಿ ಸಾಂಬಾರ್ ಗೆ ಹಾಕಿದರೆ ಪಡವಲಕಾಯಿ ತರಕಾರಿಯ ಸಂಪೂರ್ಣ ಲಾಭ ಪಡೆಯಬಹುದು.

ಸಿಹಿ ಕುಂಬಳದ ಬೀಜವನ್ನು ಎಸೆಯುವ ಬದಲು ತವಾದ ಮೇಲೆ ಸ್ವಲ್ಪ ಉಪ್ಪು, ಖಾರದ ಪುಡಿ ಉದುರಿಸಿ ಫ್ರೈ ಮಾಡಿದರೆ ಮಕ್ಕಳಿಗೆ ತಿನ್ನಲು ಕೊಡಬಹುದು.

ಹೀರೆಕಾಯಿ ಸಿಪ್ಪೆಯಿಂದ ಚಟ್ನಿ ಮಾಡಿದರೆ ಬಲುರುಚಿ. ಆಲೂಗಡ್ಡೆಯನ್ನು ಸಹಾ ಸಿಪ್ಪೆ ಸಮೇತ ಬಳಸಬಹುದು. ಹೀಗೆ ಮಾಡುವುದರಿಂದ ತರಕಾರಿಯ ಸಂಪೂರ್ಣ ಪೋಷಕಾಂಶಗಳ ಲಾಭ ಪಡೆಯಬಹುದಲ್ಲದೆ, ಅಡುಗೆ ಮನೆಯ ಹಸಿ ತ್ಯಾಜ್ಯವನ್ನು ತಗ್ಗಿಸಿ, ಪರಿಸರಕ್ಕೆ ಕೊಡುಗೆಯನ್ನೂ ಕೊಡಬಹದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments