Wednesday, August 10, 2022
Google search engine
HomeUncategorizedತನ್ನ ಹೆಸರನ್ನೇ ಜೀವನದುದ್ದಕ್ಕೂ ತಪ್ಪಾಗಿ ಬರೆದಿದ್ದ 61 ವರ್ಷದ ಈ ವ್ಯಕ್ತಿ…!

ತನ್ನ ಹೆಸರನ್ನೇ ಜೀವನದುದ್ದಕ್ಕೂ ತಪ್ಪಾಗಿ ಬರೆದಿದ್ದ 61 ವರ್ಷದ ಈ ವ್ಯಕ್ತಿ…!

ತನ್ನ ಹೆಸರನ್ನೇ ಜೀವನದುದ್ದಕ್ಕೂ ತಪ್ಪಾಗಿ ಬರೆದಿದ್ದ 61 ವರ್ಷದ ಈ ವ್ಯಕ್ತಿ…!

ವ್ಯಕ್ತಿಯೊಬ್ಬ ತನ್ನ ಜೀವನ ಬಹುಕಾಲವೂ ತಪ್ಪಾದ ಹೆಸರು ಉಚ್ಚರಿಸಿ ಜೀವನ ಸಂಧ್ಯಾಕಾಲದಲ್ಲಿ ಹೆಸರಿನ ಬಗ್ಗೆ ಜ್ಞಾನೋದಯವಾಗಿದೆ.

ಅರವತ್ತೊಂದು ವರ್ಷದ ಅಲನ್​ ಗ್ರೇಂಗರ್​ ತನ್ನ ಜನ್ಮ ಪ್ರಮಾಣಪತ್ರವನ್ನು ನೋಡಿದ ನಂತರ ತನ್ನ ಹೆಸರನ್ನು ತನ್ನ ಜೀವನದುದ್ದಕ್ಕೂ ತಪ್ಪಾಗಿ ಬರೆಯುತ್ತಿರುವುದನ್ನು ಕಂಡುಕೊಂಡು ತಬ್ಬಿಬ್ಬಾಗಿದ್ದಾರೆ.

ಆತನ ಮೊಮ್ಮಗಳು ಮಾಯಾ ಟಿಕ್​ಟಾಕ್​ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದು, ಅದರಲ್ಲಿ ಅಲನ್​ ಕಂಗಾಲಾಗಿರುವುದು ಕಂಡುಬಂದಿದೆ.

‘ಅಲನ್​’ ಅನ್ನು ಒಂದೇ “ಎಲ್​’ ನೊಂದಿಗೆ ಉಚ್ಚರಿಸಲಾಗುತ್ತದೆ. ಆದರೆ ಅಲನ್​ನ ಜನನ ಪ್ರಮಾಣಪತ್ರ ನೋಡಿದಾಗ ಅಲನ್​ ತನ್ನ ಹೆಸರಿನ ಎರಡು “ಎಲ್​’ಗಳ ಮೂಲಕ ತಪ್ಪಾದ ಕಾಗುಣಿತ ಇತ್ತು. ಇದು ಅವರ ಮನೆಯಲ್ಲಿ ಬಿಸಿಬಿಸಿ ಚರ್ಚೆಗೂ ಕಾರಣವಾಯಿತು.

ಅಲನ್​ ಅವರ ಎಲ್ಲಾ ಅಧಿಕೃತ ದಾಖಲೆಗಳು, ಅವರ ಮದುವೆಯ ಪ್ರಮಾಣಪತ್ರ ಮತ್ತು ಡ್ರೆವಿಂಗ್​ ಲೈಸೆನ್ಸ್​ ಸೇರಿದಂತೆ ಎಲ್ಲಾ ಕಡೆ ಎರಡು “ಎಲ್​’ನೊಂದಿಗೆ ತಪ್ಪು ಕಾಗುಣಿತವನ್ನು ಹೊಂದಿದೆ. ಅವನ ಜನ್ಮ ಪ್ರಮಾಣಪತ್ರವನ್ನು ಭರ್ತಿ ಮಾಡಿದವರು ತನ್ನ ಹೆಸರಿನ ತಪ್ಪು ಕಾಗುಣಿತವನ್ನು ಬರೆದಿರಬಹುದು ಎಂದು ಅಲನ್​ ಹೇಳಿಕೊಂಡಿದ್ದಾರೆ.

“ನಾನು ಇದನ್ನು ನಂಬಲು ಸಾಧ್ಯವಾಗಲಿಲ್ಲ. ಜನನ ಪ್ರಮಾಣಪತ್ರದಲ್ಲಿ ಇದು ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಹೆಸರಿನ ಎರಡು ಹಚ್ಚೆ ಹೊಂದಿದ್ದೇನೆ, ನನ್ನ ತೋಳಿನ ಮೇಲೆ ಮತ್ತು ನನ್ನ ಕೈಯಲ್ಲಿ ಒಂದು. ನಾನು ಅದನ್ನು ಬದಲಾಯಿಸಲು ಇಚ್ಛಿಸುವುದಿಲ್ಲ, ಹಾಗೆಯೇ ಈ ಹೆಸರಲ್ಲಿ ಅಂತಹ ವ್ಯತ್ಯಾಸ ಕಾಣಿಸುತ್ತಿಲ್ಲ ಎಂದಿದ್ದಾರೆ.

ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ, ಈತ ತನ್ನ ಇಡೀ ಜೀವನವಿಡೀ ತನ್ನ ಹೆಸರನ್ನು ತಪ್ಪಾಗಿ ಬರೆಯುತ್ತಿದ್ದಾನೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್​ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments