Thursday, August 11, 2022
Google search engine
HomeUncategorizedತನ್ನನ್ನು ಛೇಡಿಸಿದ ಹುಡುಗಿ ವಿರುದ್ಧ ರೊಚ್ಚಿಗೆದ್ದ ಕೋತಿ ಮಾಡಿದ್ದೇನು ಗೊತ್ತಾ ? ವಿಡಿಯೋ ನೋಡಿದ್ರೆ ನೀವೂ...

ತನ್ನನ್ನು ಛೇಡಿಸಿದ ಹುಡುಗಿ ವಿರುದ್ಧ ರೊಚ್ಚಿಗೆದ್ದ ಕೋತಿ ಮಾಡಿದ್ದೇನು ಗೊತ್ತಾ ? ವಿಡಿಯೋ ನೋಡಿದ್ರೆ ನೀವೂ ದಂಗಾಗ್ತೀರಾ !

ತನ್ನನ್ನು ಛೇಡಿಸಿದ ಹುಡುಗಿ ವಿರುದ್ಧ ರೊಚ್ಚಿಗೆದ್ದ ಕೋತಿ ಮಾಡಿದ್ದೇನು ಗೊತ್ತಾ ? ವಿಡಿಯೋ ನೋಡಿದ್ರೆ ನೀವೂ ದಂಗಾಗ್ತೀರಾ !

ಸಾಮಾನ್ಯವಾಗಿ ಮೃಗಾಲಯಗಳಲ್ಲಿ ಪ್ರಾಣಿಗಳ ತಂಟೆಗೆ ಹೋಗದಿರಿ ಎಂಬ ಮಾರ್ಗದರ್ಶನ ಇದ್ದೇ ಇರುತ್ತದೆ. ಆದರೂ ಒಂದಷ್ಟು ಮಂದಿ ಚೇಷ್ಟೇ ಮಾಡುವುದು ಇದ್ದಿದ್ದೆ. ಅನೇಕ ಬಾರಿ ಈ ರೀತಿ ಮಾಡಿದ್ದಕ್ಕೆ ಬೆಲೆ ತೆತ್ತ ಪ್ರಸಂಗ ಇದ್ದೇ ಇದೆ.

ಮೆಕ್ಸಿಕೋದಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ಅಲ್ಲಿನ ಮೃಗಾಲಯದಲ್ಲಿ ಕೋತಿಗಳಿದ್ದ ಪಂಜರವನ್ನು ಹುಡುಗಿಯೊಬ್ಬಳು ಪದೇ ಪದೇ ಹೊಡೆದಿದ್ದು, ಇದರಿಂದ ರೊಚ್ಚಿಗೆದ್ದ ಕೋತಿ ಆಕೆಯ ಕೂದಲನ್ನು ಹಿಡಿದು ಎಳೆದು ಗೋಳಾಡಿಸಿತು.

ಕೋತಿಯ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಆಕೆ ಪ್ರಯತ್ನಪಟ್ಟಷ್ಟೂ ಆ ಕೋತಿ ಹಿಡಿತ ಬಿಗಿಗೊಳಿಸಿ ಎಳೆದುಕೊಳ್ಳಲಾರಂಭಿಸಿತ್ತು. ಆಕೆಯ ಚೀತ್ಕಾರದಿಂದ ಅಲ್ಲಿದ್ದ ಕೆಲವರು ಕೋತಿಯನ್ನು ಬೆದರಿಸಿದಾಗ ಪಂಜರದಲ್ಲಿದ್ದ ಇನ್ನು ಕೆಲವು ಕೋತಿಗಳು ಅಲ್ಲಿಗೆ ಬಂದವು.

ಹಾಗೂ ಹೀಗೂ ಆಕೆ ಬಿಡಿಸಿಕೊಂಡು ಬರುವಾಗ ಸಾಕಷ್ಟು ನೋವು ಅನುಭವಿಸಿದ್ದಳು. ಒಂದು ಬಾರಿ ಬಿಡಿಸಿಕೊಂಡರೂ ಎರಡನೇ ಬಾರಿ ಪುನಃ ಕೋತಿ ಕೂದಲು ಹಿಡಿದಿತ್ತು. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಬಗೆಬಗೆಯ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಒಂಬತ್ತು ಲಕ್ಷಕ್ಕೂ ಮಿಕ್ಕಿ ವೀಕ್ಷಣೆ ಕಂಡಿದೆ. ಒಬ್ಬರು ನೆಟ್ಟಿಗರು ಇದನ್ನು ಇನ್​ಸ್ಟಂಟ್​ ಕರ್ಮ, ಆ ಶಿಕ್ಷೆ ಅನುಭವಿಸಲು ಆಕೆ ಅರ್ಹಳು ಎಂದೂ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments