Tuesday, September 27, 2022
Google search engine
HomeUncategorizedತನಿಖೆ ಚುರುಕಾಗ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ ಮುರುಘಾ ಶರಣರು: ಇದು ಮಠದ ಜಗಳ ಎಂದ್ರು ಉಮೇಶ್...

ತನಿಖೆ ಚುರುಕಾಗ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ ಮುರುಘಾ ಶರಣರು: ಇದು ಮಠದ ಜಗಳ ಎಂದ್ರು ಉಮೇಶ್ ಕತ್ತಿ

ತನಿಖೆ ಚುರುಕಾಗ್ತಿದ್ದಂತೆ ಅಜ್ಞಾತ ಸ್ಥಳಕ್ಕೆ ತೆರಳಿದ ಮುರುಘಾ ಶರಣರು: ಇದು ಮಠದ ಜಗಳ ಎಂದ್ರು ಉಮೇಶ್ ಕತ್ತಿ

ಚಿತ್ರದುರ್ಗ/ವಿಜಯಪುರ: ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಮಠಕ್ಕೆ ಗ್ರಾಮಾಂತರ ಠಾಣೆ ಸಿಪಿಐ ಭೇಟಿ ನೀಡಿದ್ದಾರೆ.

ಮುರುಘಾ ಶ್ರೀಗಳು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾದ ಮಾಹಿತಿ ಹಿನ್ನೆಲೆಯಲ್ಲಿ ಸಿಪಿಐ ಬಾಲಚಂದ್ರ ನಾಯ್ಕ್ ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಮಾಜದ ಮುಖಂಡರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಮುರುಘಾ ಶರಣರ ವಿರುದ್ಧ ಪೋಕ್ಸೋ ಕೇಸ್ ದಾಖಲಾದ ಬಗ್ಗೆ ವಿಜಯಪುರ ನಗರದಲ್ಲಿ ಸಚಿವ ಉಮೇಶ ಕತ್ತಿ ಪ್ರತಿಕ್ರಿಯೆ ನೀಡಿ, ಮುರುಗಾ ಶರಣರ ವಿರುದ್ಧ ಕೇಸ್ ಆಗಲ್ಲ. ಎಫ್ಐಆರ್ ಆದರೆ ನೋಡೋಣ. ಇದು ಮಠದ ಒಳ ಜಗಳವಾಗಿದ್ದು, ಈಗ ಅದು ಎಲ್ಲೆಲ್ಲೋ ಹೋಗಿದೆ. ಮಾಜಿ ಶಾಸಕ ಬಸವರಾಜನ್ ಮತ್ತು ಸ್ವಾಮೀಜಿಗಳ ಜಗಳದಿಂದ ಈ ರೀತಿ ಆಗಿದೆ ಎಂದರು.

ಕೋರ್ಟ್ ಏನು ತೀರ್ಮಾನ ಕೈಗೊಳ್ಳುತ್ತದೆ ನೋಡೋಣ. ಸ್ವಾಮೀಜಿಗಳ ಮೇಲೆ ಆರೋಪ ಮಾಡಿರುವುದು ತಪ್ಪು, ರಾಜ್ಯದಲ್ಲಿ ಒಂದಿಬ್ಬರು ಸ್ವಾಮೀಜಿಗಳು ಸಮಾಜವನ್ನು ತಿದ್ದಬೇಕು ಪ್ರಯತ್ನ ನಡೆಸಿದ್ದಾರೆ. ಅಂತಹ ಪ್ರಯತ್ನಗಳಿಗೆ ತೊಂದರೆ ನೀಡಬಾರದು, ಎಂದು ವಿಜಯಪುರ ನಗರದಲ್ಲಿ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments