ತಂದೆ ನಿಧನದ ನಂತರ ತಾಯಿಯೇ ಮಗುವಿಗೆ ಸಹಜ ರಕ್ಷಕಿ; ಆಕೆಗಿದೆ ಉಪನಾಮ ನಿರ್ಧರಿಸುವ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ
ತಂದೆ ನಿಧನದ ನಂತರ ತಾಯಿಯೇ ಮಗುವಿಗೆ ಸಹಜ ರಕ್ಷಕಿಯಾಗಿದ್ದು, ಹೀಗಾಗಿ ಮಗುವಿನ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರಕರಣ ಒಂದರ ವಿಚಾರಣೆ ವೇಳೆ ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ದಿನೇಶ್ ಮಾಹೇಶ್ವರಿ ಮತ್ತು ಕೃಷ್ಣ ಮುರಾರಿ ಅವರುಗಳಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಹಿಳೆ ಒಬ್ಬರು ತಮ್ಮ ಎರಡನೇ ಗಂಡನ ಹೆಸರನ್ನು ಮಗುವಿನ ಮಲತಂದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪು ಅತ್ಯಂತ ಕ್ರೂರ ಮತ್ತು ಅರ್ಥ ಹೀನ ಎಂದು ಅಭಿಪ್ರಾಯಪಟ್ಟ ಸುಪ್ರೀಂ ನ್ಯಾಯಪೀಠ, ಇದು ಮಗುವಿನ ಮಾನಸಿಕ ಆರೋಗ್ಯ ಮತ್ತು ಆತ್ಮ ಗೌರವದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದೆ.