Saturday, November 26, 2022
Google search engine
HomeUncategorizedಡ್ರೋನ್ ಪ್ರತಾಪನ ಮತ್ತೊಂದು ಕರಾಮತ್ತು..? ಕುತೂಹಲ ಕೆರಳಿಸಿದೆ ಹೊಸ ಫೋಟೋ

ಡ್ರೋನ್ ಪ್ರತಾಪನ ಮತ್ತೊಂದು ಕರಾಮತ್ತು..? ಕುತೂಹಲ ಕೆರಳಿಸಿದೆ ಹೊಸ ಫೋಟೋ

ಡ್ರೋನ್ ಪ್ರತಾಪನ ಮತ್ತೊಂದು ಕರಾಮತ್ತು..? ಕುತೂಹಲ ಕೆರಳಿಸಿದೆ ಹೊಸ ಫೋಟೋ

ಡ್ರೋನ್ ಪ್ರತಾಪ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ಪ್ರತಾಪರದ್ದೇ ಸುದ್ದಿ. ವಿವಾದದ ಬಳಿಕ ನಾಪತ್ತೆಯಾಗಿದ್ದ ಡ್ರೋನ್​ ಪ್ರತಾಪ್ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. ತಮ್ಮ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಕಾಣಿಸಿಕೊಂಡಿದ್ದಾರೆ. ಅವರ ಫೋಸ್ಟರ್ ಇದೀಗ ವೈರಲ್ ಆಗಿದೆ.

ಹೌದು, ಅವರ ಇನ್ ಸ್ಟಾಗ್ರಾಂ ನಲ್ಲಿ ಫೋಟೋ ವನ್ನು ಹಂಚಿಕೊಂಡಿದ್ದಾರೆ ಡ್ರೋನ್ ಪ್ರತಾಪ್. ಕೈಗೆ ದೊಡ್ಡ ಹಳದಿ ಗ್ಲೌಸ್ ಕಟ್ಟಿಕೊಂಡು ಟೇಬಲ್ ಮೇಲೊಂದು ಲ್ಯಾಪ್‌ಟಾಪ್‌ ಇಟ್ಟು, ಅದಕ್ಕೆ ಡಾಟಾ ಕೇಬಲ್ ಅಳವಡಿಸಿರುವ ಯಾವುದೋ ಒಂದು ಸಾಧನವನ್ನು ತಮ್ಮ ಮುಂದಿಟ್ಟುಕೊಂಡಿದ್ದಾರೆ. ಕಣ್ಣಿಗೆ ಕನ್ನಡಕ ಧರಿಸಿ, ಒಂದು ಕೈಯಲ್ಲಿ ಮಷಿನ್ ಹಿಡಿದು ನಗುತ್ತಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಇದರಲ್ಲಿ ಡ್ರೋನ್‌ ಕ್ಯಾಮೆರಾದ ಚಿತ್ರ ಕೂಡ ಕಂಡಿದೆ.

ಇವನ್ನಲ್ಲಾ ನೋಡ್ತಾ ಇದ್ರೆ ಪ್ರತಾಪ್‌ ಯಾವ ಸಾಹಸಕ್ಕೆ ಕೈ ಹಾಕಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ. ಇನ್ನು ಈ ಫೋಟೋ ಜೊತೆಗೆ ಅಡಿ ಬರಹ ಹಾಕಿದ್ದಾರೆ. ಕೆಟ್ಟ ಜನರು ನಿಮ್ಮ ಜೀವನದಿಂದ ದೂರ ಹೋದಾಗ ಸರಿಯಾದ ವಿಷಯಗಳು ನಿಮ್ಮ ಜೀವನದಲ್ಲಿ ಬರಲು ಪ್ರಾರಂಭವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಒಟ್ನಲ್ಲಿ ಎಲ್ಲರಿಗೂ ಕಾಗೆ ಹಾರಿಸಿ ಗುರುತಿಸಿಕೊಂಡಿದ್ದ ಪ್ರತಾಪ್, ಈ ಬಾರೀ ಯಾವ ಸಾಹಸ ಮಾಡ್ತಾರೆ ಅಂತ ಕಾದು ನೋಡಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments