Tuesday, September 27, 2022
Google search engine
HomeUncategorizedಠೇವಣಿ ಇಡಲು ಕೊಟ್ಟಿದ್ದ 5 ಕೋಟಿ ರೂ. ಚೆಕ್ ದುರ್ಬಳಕೆ: ‘ಮೂಡಾ’ ವಂಚನೆ ಆರೋಪಿಗಳಿಗೆ ಸಿಬಿಐ...

ಠೇವಣಿ ಇಡಲು ಕೊಟ್ಟಿದ್ದ 5 ಕೋಟಿ ರೂ. ಚೆಕ್ ದುರ್ಬಳಕೆ: ‘ಮೂಡಾ’ ವಂಚನೆ ಆರೋಪಿಗಳಿಗೆ ಸಿಬಿಐ ಕೋರ್ಟ್ ಶಿಕ್ಷೆ

ಠೇವಣಿ ಇಡಲು ಕೊಟ್ಟಿದ್ದ 5 ಕೋಟಿ ರೂ. ಚೆಕ್ ದುರ್ಬಳಕೆ: ‘ಮೂಡಾ’ ವಂಚನೆ ಆರೋಪಿಗಳಿಗೆ ಸಿಬಿಐ ಕೋರ್ಟ್ ಶಿಕ್ಷೆ

ಬೆಂಗಳೂರು: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 7 ವರ್ಷ ಶಿಕ್ಷೆ, 5 ಕೋಟಿ ರೂಪಾಯಿ ದಂಡ ವಿಧಿಸಿದೆ.

ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಕೆಬ್ಬಳ್ಳಿ ಆನಂದ, ಹೆಚ್.ಎಸ್. ನಾಗಲಿಂಗಸ್ವಾಮಿ. ಚಂದ್ರಶೇಖರ್. ಹೆಚ್.ಕೆ. ನಾಗರಾಜ, ಕೆ.ಬಿ. ಹರ್ಶನ್ ಅವರಿಗೆ ಸಿಬಿಐ ಕೋರ್ಟ್ ನಿಂದ ಶಿಕ್ಷೆ ವಿಧಿಸಲಾಗಿದೆ. ಠೇವಣಿ ಇಡಲು ಮೂಡಾ ಆಯುಕ್ತರು ಕೊಟ್ಟಿದ್ದ ಚೆಕ್ ದುರುಪಯೋಗ ಮಾಡಿಕೊಂಡಿದ್ದರು. 5 ಕೋಟಿ ರೂ.ನ 5 ಚೆಕ್ ಗಳನ್ನು ಆಕಾಶ್ ಎಂಟರ್ಪ್ರೈಸಸ್ ಗೆ ವರ್ಗಾವಣೆ ಮಾಡಲಾಗಿತ್ತು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಎಫ್.ಡಿ.ಎ. ಹೆಚ್.ಕೆ. ನಾಗರಾಜ ಚೆಕ್ ದುರುಪಯೋಗ ಮಾಡಿಕೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments