Saturday, November 26, 2022
Google search engine
HomeUncategorizedಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ಟೈಟಾನಿಕ್​ ಚಿತ್ರ ನೆನಪಿಸುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್​

ವಿಶ್ವಖ್ಯಾತಿ ಪಡೆದಿರುವ ಟೈಟಾನಿಕ್​ ಚಲನಚಿತ್ರವನ್ನು ನೋಡಿದವರಿಗೆ ಈ ದೃಶ್ಯ ನೆನಪಿರಬಹುದು. ಕ್ರೂಸ್​ ಮುಳುಗಲು ಪ್ರಾರಂಭಿಸಿದ ಸಂದರ್ಭದಲ್ಲಿ ಪ್ರಯಾಣಿಕರನ್ನು ಶಾಂತಗೊಳಿಸಲು ಟೈಟಾನಿಕ್‌ನಲ್ಲಿರುವ ಮ್ಯೂಸಿಕ್​ ಬ್ಯಾಂಡ್ ಸಂಗೀತ ಬಾರಿಸಲು ಪ್ರಾರಂಭಿಸಿತು.

ಹಡಗು ಮುಳುಗಿದಂತೆಯೇ ಸಂಗೀತವೂ ಜೋರಾಗಿ ಜನರಲ್ಲಿ ಆತಂಕವನ್ನು ಮರೆಮಾಚಲು ಪ್ರಯತ್ನಿಸಿತ್ತು. ಅಂಥದ್ದೇ ನೈಜ ಘಟನೆಯೊಂದು ನಡೆದಿದೆ.

ಮೆಕ್ಸಿಕನ್ ಮಾಲ್‌ನಲ್ಲಿ ರೆಕಾರ್ಡ್ ಮಾಡಲಾದ 2019 ರ ಹಳೆಯ ವಿಡಿಯೋ ಇದಾಗಿದ್ದು, ಇದೀಗ ಪುನಃ ವೈರಲ್​ ಆಗಿದೆ. ಮಾಲ್‌ನಲ್ಲಿ ಬ್ಯಾಂಡ್ ನುಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಸಂಗೀತ ಮುಂದುವರೆದಂತೆ, ಮಾಲ್‌ನ ಮೇಲ್ಚಾವಣಿಯಿಂದ ನೀರು ಸುರಿಯುವುದನ್ನು ಮತ್ತು ನೆಲದ ಮೇಲೆ ನೀರು ಹರಿಯುವುದನ್ನು ಕಾಣಬಹುದು.

ಮೈ ಹಾರ್ಟ್ ವಿಲ್ ಗೋ ಆನ್ ಹಾಡಿನ ಭಾವಪೂರ್ಣ ರಾಗವನ್ನು ನುಡಿಸಲು ಬ್ಯಾಂಡ್​ನವರು ಪ್ರಾರಂಭಿಸುತ್ತಾರೆ. ಅಲ್ಲಿ ನೆರೆದಿದ್ದವರು ನಗುವುದು ಮತ್ತು ಉಲ್ಲಾಸದಿಂದ ಕೂಡಿರುವುದನ್ನು ಕಾಣಬಹುದು. ಈ ವಿಡಿಯೋ ಪುನಃ ವೈರಲ್​ ಆದರೂ ಲಕ್ಷಾಂತರ ಮಂದಿ ಇದನ್ನು ವೀಕ್ಷಿಸುತ್ತಿದ್ದು, ಹಲವು ರೀತಿಯ ಕಮೆಂಟ್​ ಹಾಕುತ್ತಿದ್ದಾರೆ.

The mall started flooding so the live band starts to perform the Titanic song from Damnthatsinteresting

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments