‘ಝೌಲಿ’ ನೃತ್ಯದ ವಿಡಿಯೋ ವೈರಲ್: ನೆಟ್ಟಿಗರಿಂದ ಶ್ಲಾಘನೆಗಳ ಮಹಾಪೂರ

ಝೌಲಿ ಎಂದು ಕರೆಯಲ್ಪಡುವ ಗುರೋ ಜನರ ಸಾಂಪ್ರದಾಯಿಕ ನೃತ್ಯವನ್ನು ವಿಶ್ವದ ಅತ್ಯಂತ ಅಸಾಧ್ಯವಾದ ನೃತ್ಯ ಎಂದು ಹೆಸರಿಸಲಾಗಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಇದರ ಮೋಡಿ ಮಾಡುವ ಚಲನೆಗಳ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಗುರೋ ಜನರ ಸಾಂಪ್ರದಾಯಿಕ ವೇಷಭೂಷಣ ಮತ್ತು ವಿಸ್ತಾರವಾದ ಮುಖವಾಡವನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ನೃತ್ಯವು ಕೆಲವು ಮಹಾಕಾವ್ಯದ ಪಾದದ ಚಲನೆಯನ್ನು ತೋರಿಸುತ್ತದೆ. ವಿಡಿಯೋದಲ್ಲಿ ಬಳಸಲಾದ ಹಾಡು ಝೌಲಿ ಸಮಯದಲ್ಲಿ ಬಳಸಿದ ಮೂಲ ಹಾಡಲ್ಲದಿದ್ದರೂ, ನೃತ್ಯವನ್ನು ಆನಂದಿಸಬಹುದಾಗಿದೆ.
ನರ್ತಕಿಯು ತನ್ನ ದೇಹದ ಮೇಲ್ಭಾಗವನ್ನು ಹೇಗೆ ಸ್ಥಿರವಾಗಿ ಇಡುತ್ತಾರೆ ಎಂಬುದನ್ನು ಕಂಡು ಅಚ್ಚರಿ ಪಡುವಂತಾಗುತ್ತದೆ. ಈ ಅಮೋಘ ನೃತ್ಯಕ್ಕೆ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಇಂಥದ್ದೊಂದು ಅದ್ಭುತ ನೃತ್ಯವನ್ನು ನೇರವಾಗಿ ನೋಡಲು ಸಾಧ್ಯವಾಗುವುದಿಲ್ಲ. ಅಂಥವರಿಗೆ ಸಾಮಾಜಿಕ ಜಾಲತಾಣ ಒಂದು ಮಾರ್ಗವಾಗಿದೆ. ಇದರಿಂದ ಹಲವು ಸಂಪ್ರದಾಯಗಳನ್ನು ನಾವು ನೋಡಬಹುದಾಗಿದೆ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.