ಜೀವ ಬೆದರಿಕೆ ಎದುರಿಸುತ್ತಿರುವ ನೂಪುರ್ ಶರ್ಮಾಗೆ ಗನ್ ಲೈಸೆನ್ಸ್
ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಕಾರಣಕ್ಕೆ ಜೀವ ಬೆದರಿಕೆ ಎದುರಿಸುತ್ತಿರುವ ನೂಪುರ್ ಶರ್ಮಾ ಅವರಿಗೆ ಗನ್ ಲೈಸೆನ್ಸ್ ನೀಡಲಾಗಿದೆ.
ದೆಹಲಿ ಪೊಲೀಸರು ನೂಪುರ್ ಶರ್ಮಾ ಅವರಿಗೆ ಗನ್ ಹೊಂದಲು ಅನುಮತಿ ನೀಡಿದ್ದು, ಅವರ ಸುರಕ್ಷತೆ ದೃಷ್ಟಿಯಿಂದ ಇದನ್ನು ಜೊತೆಯಲ್ಲಿ ಕೊಂಡೊಯ್ಯಲು ಅವಕಾಶ ಕಲ್ಪಿಸಲಾಗಿದೆ.
ನೂಪುರ್ ಶರ್ಮಾ ಅವರಿಗೆ ಈಗಾಗಲೇ ಸರ್ಕಾರದ ವತಿಯಿಂದ ಭದ್ರತೆಯನ್ನು ಸಹ ಕಲ್ಪಿಸಲಾಗಿದ್ದು, ಇದೀಗ ಸ್ವತಃ ಗನ್ ಹೊಂದಲು ಅನುಮತಿ ನೀಡಲಾಗಿದೆ.