Thursday, August 11, 2022
Google search engine
HomeUncategorizedಜೀವನ ನಿರ್ವಹಣೆಗೆ ಟೀ ಸ್ಟಾಲ್ ನಡೆಸುವ 91 ವರ್ಷದ ವೃದ್ದೆ…!

ಜೀವನ ನಿರ್ವಹಣೆಗೆ ಟೀ ಸ್ಟಾಲ್ ನಡೆಸುವ 91 ವರ್ಷದ ವೃದ್ದೆ…!

ಜೀವನ ನಿರ್ವಹಣೆಗೆ ಟೀ ಸ್ಟಾಲ್ ನಡೆಸುವ 91 ವರ್ಷದ ವೃದ್ದೆ…!

ಜೀವನ ನಿರ್ವಹಣೆಗಾಗಿ ಇನ್ನೊಬ್ಬರ ಬಳಿ ಕೈಚಾಚಲು ಇಷ್ಟಪಡದ 91 ವರ್ಷ ಮಹಿಳೆಯೊಬ್ಬರು ಸ್ವಾವಲಂಬಿಯಾಗಿ ಬದುಕಲು ಟೀ ಸ್ಟಾಲ್ ನಡೆಸಿ ಸಮಾಜದ ಗಮನ ಸೆಳೆಯುತ್ತಿದ್ದಾರೆ.

ಕೇರಳ ಕರಾವಳಿಯ ಅಲಪ್ಪುಳ ಜಿಲ್ಲೆಯ ದೇವಿಕುಲಂಗರ ಗ್ರಾಮದಲ್ಲಿ ತಾತ್ಕಾಲಿಕ ಸ್ಟಾಲ್ ಇಟ್ಟುಕೊಂಡಿರುವ 91 ವರ್ಷದ ತಂಗಮ್ಮ ತಮ್ಮ ಜೀವನೋಪಾಯಕ್ಕಾಗಿ ತಮ್ಮ ದಿನನಿತ್ಯದ ಹೋರಾಟವನ್ನು ಬೆಳಗ್ಗೆ 5 ಗಂಟೆಗೆ ಪ್ರಾರಂಭಿಸುತ್ತಾರೆ.

ಬೆಳಗ್ಗೆ ಟೀ ಮಾರಾಟ ಮಾಡುವ ಇವರಿಗೆ ಆಕೆಯ 68 ವರ್ಷದ ಮಗಳು ವಸಂತಕುಮಾರಿ ಸಹಾಯ ಮಾಡುತ್ತಾರೆ. ಮಧ್ಯಾಹ್ನ 2.30 ರ ನಂತರ ವಿವಿಧ ರೀತಿಯ ಕರಿದ ತಿನಿಸು ಮಾಡಿ ಮಾರುತ್ತಾರೆ.

ವಾಹನ ಅಪಘಾತದಲ್ಲಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಬೆಳಿಗ್ಗೆ ನಾವು ಚಹಾವನ್ನು ಮಾತ್ರ ನೀಡುತ್ತೇವೆ. 2- 2.30ರ ನಂತರ, ನಾವು ತಿಂಡಿಗಳನ್ನು ತಯಾರಿಸಲು ಪ್ರಾರಂಭಿಸುತ್ತೇವೆ. ಸಂಜೆಯ ಹೊತ್ತಿಗೆ ಎಲ್ಲವೂ ಮಾರಾಟವಾಗುತ್ತದೆ. ರಾತ್ರಿ 9- 9.30 ಕ್ಕೆ ನಾವು ಅಂಗಡಿಯನ್ನು ಮುಚ್ಚುತ್ತೇವೆ ಎಂದು ತಂಗಮ್ಮ ಹೇಳುತ್ತಾರೆ. ಕಳೆದ 17 ವರ್ಷದಿಂದಲೂ ಈ ಉದ್ಯೋಗ ಮಾಡುತ್ತಿದ್ದೇನೆ, ಇದೇ ನಮ್ಮ ಜೀವನಾಧಾರ ಎಂದು ವಿವರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments