Thursday, February 2, 2023
Google search engine
HomeUncategorizedಜಾಹೀರಾತಿನಲ್ಲಿ ನೆಹರು ಚಿತ್ರ ಹಾಕಬೇಕಿತ್ತು ಎಂದ ಸಚಿವ ಬಿ.ಸಿ. ಪಾಟೀಲ್

ಜಾಹೀರಾತಿನಲ್ಲಿ ನೆಹರು ಚಿತ್ರ ಹಾಕಬೇಕಿತ್ತು ಎಂದ ಸಚಿವ ಬಿ.ಸಿ. ಪಾಟೀಲ್

ಜಾಹೀರಾತಿನಲ್ಲಿ ನೆಹರು ಚಿತ್ರ ಹಾಕಬೇಕಿತ್ತು ಎಂದ ಸಚಿವ ಬಿ.ಸಿ. ಪಾಟೀಲ್

ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ರಾಜ್ಯ ಸರ್ಕಾರ ಪತ್ರಿಕೆಗಳಿಗೆ ನೀಡಿದ್ದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ಕೊಕ್ ನೀಡಲಾಗಿತ್ತು. ಇದು ತೀವ್ರ ವಿರೋಧಕ್ಕೆ ಕಾರಣವಾಗಿದ್ದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಟುಶಬ್ದಗಳಲ್ಲಿ ಟೀಕಿಸಿದ್ದರು.

ಆದರೆ ಇದನ್ನು ಸಮರ್ಥಿಸಿಕೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, 65 ವರ್ಷಗಳ ಕಾಲ ನೆಹರು ಅವರ ಹೆಸರಿನಲ್ಲಿಯೇ ಕಾಂಗ್ರೆಸ್ ನವರು ದೇಶ ನಡೆಸಿದ್ದಾರೆ. ನಾವು ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ನೀಡಿದ ಹಲವು ಮಹನೀಯರನ್ನು ಸ್ಮರಿಸುವ ಕಾರ್ಯವನ್ನು ಮಾಡಿದ್ದೇವೆ ಎಂದು ಹೇಳಿದ್ದರು.

ಇದರ ಮಧ್ಯೆ ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಕೃಷಿ ಸಚಿವ ಬಿ.ಸಿ. ಪಾಟೀಲ್, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಜಾಹೀರಾತಿನಲ್ಲಿ ಜವಾಹರ್ ಲಾಲ್ ನೆಹರು ಅವರ ಭಾವಚಿತ್ರ ಹಾಕಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments