Friday, March 24, 2023
Google search engine
HomeUncategorizedಜಲಪಾತದ ಕೆಳಗೆ ಕಾರು ತೊಳೆಯುವಾಗ ಎಡವಟ್ಟು; ವಿಡಿಯೋ ನೋಡಿ ಬೇಕಿತ್ತಾ ಇದು ಅಂದ್ರು ನೆಟ್ಟಿಗರು

ಜಲಪಾತದ ಕೆಳಗೆ ಕಾರು ತೊಳೆಯುವಾಗ ಎಡವಟ್ಟು; ವಿಡಿಯೋ ನೋಡಿ ಬೇಕಿತ್ತಾ ಇದು ಅಂದ್ರು ನೆಟ್ಟಿಗರು

ಜಲಪಾತದ ಕೆಳಗೆ ಕಾರು ತೊಳೆಯುವಾಗ ಎಡವಟ್ಟು; ವಿಡಿಯೋ ನೋಡಿ ಬೇಕಿತ್ತಾ ಇದು ಅಂದ್ರು ನೆಟ್ಟಿಗರು

ಮಹೀಂದ್ರ ಸ್ಕಾರ್ಪಿಯೊ ಕಾರಿನ ಸನ್‌ರೂಫ್ ಮೂಲಕ ನೀರು ಸೋರಿಕೆಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅರುಣ್ ಪನ್ವಾರ್ ಎನ್ನುವವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರಿನೊಳಗೆ ನೀರು ಹರಿಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಇದಕ್ಕೆ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ.

ಪವಾರ್ ಅವರು ತಮ್ಮ ಮಹೀಂದ್ರ ಸ್ಕಾರ್ಪಿಯೊ ಎನ್ ಅನ್ನು ಪರ್ವತದ ಹಾದಿಯಲ್ಲಿ ಹೋಗುತ್ತಿರುವ ಸಮಯದಲ್ಲಿ ಜಲಪಾತದ ಅಡಿಯಲ್ಲಿ ತೊಳೆದಿದ್ದಾಗಿ ಹೇಳಿದ್ದಾರೆ.

ಕಾರನ್ನು ಜಲಪಾತದ ಕೆಳಗೆ ನಿಲ್ಲಿಸಿದಾಗ, ನೀರು ಸನ್‌ರೂಫ್ ಮತ್ತು ಸ್ಪೀಕರ್‌ಗಳ ಮೂಲಕ ಕಾರಿನೊಳಗೆ ಸೋರಿಕೆಯಾಯಿತು ಎಂದಿದ್ದಾರೆ. ಕಾರಿನೊಳಗೆ ನೀರು ನುಗ್ಗಿದ್ದರಿಂದ ಒಳಭಾಗ ಹಾಳಾಗಿದೆ ಎಂದಿದ್ದಾರೆದು ತಿಳಿಸಿದ್ದಾರೆ. ಆದರೆ ಈ ರೀತಿ ತಮ್ಮ ಕಾರನ್ನೂ ತೊಳೆದಿದ್ದು, ಯಾವುದೇ ಹಾನಿಯಾಗಲಿಲ್ಲ ಎಂದು ಹಲವರು ಕಮೆಂಟ್‌ ಮೂಲಕ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments