Tuesday, December 6, 2022
Google search engine
HomeUncategorizedಜಪಾನ್ ವಿದ್ಯಾರ್ಥಿಗಳಿಂದ ‘ಶುದಾನ್ ಕೌಡೌ’: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಜಪಾನ್ ವಿದ್ಯಾರ್ಥಿಗಳಿಂದ ‘ಶುದಾನ್ ಕೌಡೌ’: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಜಪಾನ್ ವಿದ್ಯಾರ್ಥಿಗಳಿಂದ ‘ಶುದಾನ್ ಕೌಡೌ’: ವೈರಲ್​ ವಿಡಿಯೋಗೆ ಮೆಚ್ಚುಗೆಗಳ ಮಹಾಪೂರ

ಅತ್ಯಂತ ನವೀನ ತಂತ್ರಜ್ಞಾನಗಳನ್ನು ರಚಿಸುವುದರಿಂದ ಹಿಡಿದು ಅತ್ಯಂತ ಹೃದಯಸ್ಪರ್ಶಿ ಚಲನಚಿತ್ರಗಳನ್ನು ತಯಾರಿಸುವವರೆಗೆ ಜಪಾನ್​ ದೇಶವನ್ನು ಮೀರಿಸುವವರು ಇಲ್ಲ. ಆಟೋಟಗಳು ಹಾಗೂ ಮಕ್ಕಳಲ್ಲಿ ಶಿಸ್ತಿನ ವಿಷಯ ಬಂದಾಗಲೂ ಜಪಾನ್​ ಸದಾ ಮುಂದು. ಅಂಥದ್ದೇ ವಿಡಿಯೋ ಒಂದು ಈಗ ವೈರಲ್​ ಆಗಿದೆ.

ಅಪರೂಪದ, ಕುತೂಹಲಭರಿತ ನಡುಗೆಯ ಕಾರ್ಯಕ್ರಮವನ್ನು ನೀಡಿರುವ ಜಪಾನಿನ ವಿದ್ಯಾರ್ಥಿಗಳು ನೆಟ್ಟಿಗರನ್ನು ಕುತೂಹಲಕ್ಕೆ ತಳ್ಳಿದ್ದಾರೆ. ‘ಶುದಾನ್ ಕೌಡೌ’ ಎಂದು ಕರೆಯಲ್ಪಡುವ ವಿದ್ಯಾರ್ಥಿಗಳ ಗುಂಪು ಈ ಕಾರ್ಯಕ್ರಮ ನೀಡಿದೆ. ನಡುಗೆಯಲ್ಲಿ ಸಿಂಕ್ರೊನೈಸ್ ಮಾಡಿದ ರೀತಿ ಅಚ್ಚರಿ ಮೂಡಿಸುವಂತಿದೆ.

ಈ ಕ್ರೀಡೆಯು 1960 ರಿಂದ ನಿಪ್ಪಾನ್ ಕ್ರೀಡಾ ವಿಜ್ಞಾನ ವಿಶ್ವವಿದ್ಯಾಲಯದ ಒಂದು ಭಾಗವಾಗಿದೆ. ಈಗ ವಿಶ್ವವಿದ್ಯಾನಿಲಯದ ವಾರ್ಷಿಕ ಪ್ರದರ್ಶನದಲ್ಲಿ ಇದನ್ನು ಮಾಡಲಾಗಿದ್ದು, ವಿಡಿಯೋ ವೈರಲ್​ ಆಗಿದೆ. ಈ ಹಿನ್ನೆಲೆಯಲ್ಲಿ ಅಪರೂಪದ ವಿಡಿಯೋ ವಿಶ್ವಖ್ಯಾತಿ ಹೊಂದುವಂತಾಗಿದೆ.

ವಿದ್ಯಾರ್ಥಿಗಳು ಸಿಂಕ್ರೊನೈಸ್ ಮಾಡಲಾದ ರೀತಿಯಲ್ಲಿ ನಡೆಯುವುದನ್ನು ಈ ವಿಡಿಯೋದಲ್ಲಿ ನೋಡಬಹುದು.‌ ವಿದ್ಯಾರ್ಥಿಗಳು ಪ್ರದರ್ಶನಕ್ಕೆ ತಿಂಗಳ ಮೊದಲು ವಾರದಲ್ಲಿ ಮೂರು ದಿನ ಅಭ್ಯಾಸ ಮಾಡುತ್ತಾರೆ. ಇಂಥದ್ದೊಂದು ಅಪರೂಪದ ಚಿಕ್ಕದಾಗಿರುವ ಈ ವಿಡಿಯೋ ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಹೊಂದಿದ್ದು, ಜಪಾನಿಗರನ್ನು ಮತ್ತೊಮ್ಮೆ ನೆಟ್ಟಿಗರು ಶ್ಲಾಘಿಸಿದ್ದಾರೆ. ಶಿಸ್ತಿಗೆ ಇವರಿಗೆ ಇವರೇ ಸಾಟಿ ಎಂದು ಕೊಂಡಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments