Monday, December 5, 2022
Google search engine
HomeUncategorizedಜನರ ಕಷ್ಟ ನಿವಾರಣೆಗೆ ಅಧಿಕಾರಕ್ಕೆ ಬರಬೇಕು: ಭರವಸೆ ಈಡೇರಿಸದಿದ್ರೆ ಜೆಡಿಎಸ್ ವಿಸರ್ಜನೆ: ಹೆಚ್.ಡಿ.ಕೆ.

ಜನರ ಕಷ್ಟ ನಿವಾರಣೆಗೆ ಅಧಿಕಾರಕ್ಕೆ ಬರಬೇಕು: ಭರವಸೆ ಈಡೇರಿಸದಿದ್ರೆ ಜೆಡಿಎಸ್ ವಿಸರ್ಜನೆ: ಹೆಚ್.ಡಿ.ಕೆ.

ಜನರ ಕಷ್ಟ ನಿವಾರಣೆಗೆ ಅಧಿಕಾರಕ್ಕೆ ಬರಬೇಕು: ಭರವಸೆ ಈಡೇರಿಸದಿದ್ರೆ ಜೆಡಿಎಸ್ ವಿಸರ್ಜನೆ: ಹೆಚ್.ಡಿ.ಕೆ.

ಕೋಲಾರ: ಮತ್ತೆ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಬೇಕೆಂಬ ಆಸೆ ನನಗಿಲ್ಲ. ಜನರ ಕಷ್ಟಗಳನ್ನು ನಿವಾರಿಸಲು ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಪಂಚರತ್ನ ರಥಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರೈತರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಸಾಲ ಮನ್ನಾ ಮಾಡಲು ದುಡ್ಡು ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿಸಿದ್ದರು. ಮತ್ತೆ ಅವರೇ ನನ್ನ ಮನೆ ಬಾಗಿಲಿಗೆ ಬಂದು ಸರ್ಕಾರ ರಚಿಸಿ ಎಂದು ಹೇಳಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ 25,000 ಕೋಟಿ ರೂ. ಸಾಲಮನ್ನಾ ಮಾಡಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಮುಖ್ಯಮಂತ್ರಿಯಾಗಲು ಹೊರಟಿದ್ದಾರೆ. ಪಂಚರತ್ನ ರಥಯಾತ್ರೆ ಬಗ್ಗೆಯೂ ಲಘುವಾಗಿ ಮಾತನಾಡಿದ್ದಾರೆ. 123 ಸ್ಥಾನದ ಗುರಿ ಇಟ್ಟುಕೊಂಡು ಪಂಚರತ್ನ ರಥಯಾತ್ರೆ ಮಾಡುತ್ತಿದ್ದೇವೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ ನೀಡಿದ ಭರವಸೆ ಈಡೇರಿಸುತ್ತೇನೆ. ಒಂದು ವೇಳೆ ಭರವಸೆ ಈಡೇರಿಸದಿದ್ದರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments