Saturday, September 24, 2022
Google search engine
HomeUncategorizedಜಗದ್ಗುರುಗಳು ಯಾರೂ ಇಲ್ಲ, ಎಲ್ಲಾ ಜಾತಿ ಗುರುಗಳೇ: ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ; ಧರ್ಮಸ್ಥಳದಂತೆ ಸಂಸಾರಿಗಳೇ ಪೀಠಾಧಿಪತಿಯಾಗಲಿ:...

ಜಗದ್ಗುರುಗಳು ಯಾರೂ ಇಲ್ಲ, ಎಲ್ಲಾ ಜಾತಿ ಗುರುಗಳೇ: ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ; ಧರ್ಮಸ್ಥಳದಂತೆ ಸಂಸಾರಿಗಳೇ ಪೀಠಾಧಿಪತಿಯಾಗಲಿ: ಹೆಚ್. ವಿಶ್ವನಾಥ್

ಜಗದ್ಗುರುಗಳು ಯಾರೂ ಇಲ್ಲ, ಎಲ್ಲಾ ಜಾತಿ ಗುರುಗಳೇ: ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ; ಧರ್ಮಸ್ಥಳದಂತೆ ಸಂಸಾರಿಗಳೇ ಪೀಠಾಧಿಪತಿಯಾಗಲಿ: ಹೆಚ್. ವಿಶ್ವನಾಥ್

ಮೈಸೂರು: ಪೋಕ್ಸೋ ಪ್ರಕರಣದಲ್ಲಿ ಮರುಘಾ ಶ್ರೀಗಳು ಪೋಲಿಸ್ ವಶದಲ್ಲಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಜಗದ್ಗುರುಗಳು ಯಾರೂ ಇಲ್ಲ, ಎಲ್ಲರೂ ಜಾತಿ ಗುರುಗಳೇ ಇದ್ದಾರೆ. ಇವರಿಗೆ ತಮ್ಮ ಜಾತಿ ಧರ್ಮ ಕಾಪಾಡುತ್ತದೆ ಎನ್ನುವ ಧೈರ್ಯ ಇದೆ. ಆದರೆ, ಇವರೆಲ್ಲರಿಗಿಂತಲೂ ಕಾನೂನು ದೊಡ್ಡದು ಎಂದು ಹೇಳಿದ್ದಾರೆ.

ಅಪರಾಧಿ ಪರ ಮಾತನಾಡಿದವರನ್ನು ಕೂಡ ಈ ಪ್ರಕರಣದಲ್ಲಿ ಸೇರ್ಪಡೆ ಮಾಡಬೇಕು. ಪೀಠಾಧಿಪತಿಗಳಲ್ಲಿ ಬಹುತೇಕರು ಬ್ರಹ್ಮಚಾರಿಗಳ ವೇಷದಲ್ಲಿದ್ದಾರೆ. ಇನ್ನು ಮುಂದೆ ಮಠಗಳಿಗೆ ಸಂಸಾರಿಗಳೇ ಪೀಠಾಧಿಪತಿಯಾಗಲಿ, ಧರ್ಮಸ್ಥಳವೇ ಇದಕ್ಕೆ ಉದಾಹರಣೆಯಾಗಲಿ ಎಂದು ಹೆಚ್. ವಿಶ್ವನಾಥ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments