Friday, December 9, 2022
Google search engine
HomeUncategorizedಚೀನಾದಲ್ಲಿ ಅಪಘಾತಕ್ಕೀಡಾಗಿದೆ ಟೆಸ್ಲಾದ ಸ್ವಯಂಚಾಲಿತ ಕಾರು, ಇಬ್ಬರನ್ನು ಬಲಿ ಪಡೆದ ಭಯಾನಕ ವಿಡಿಯೋ ವೈರಲ್‌…!

ಚೀನಾದಲ್ಲಿ ಅಪಘಾತಕ್ಕೀಡಾಗಿದೆ ಟೆಸ್ಲಾದ ಸ್ವಯಂಚಾಲಿತ ಕಾರು, ಇಬ್ಬರನ್ನು ಬಲಿ ಪಡೆದ ಭಯಾನಕ ವಿಡಿಯೋ ವೈರಲ್‌…!

ಚೀನಾದಲ್ಲಿ ಅಪಘಾತಕ್ಕೀಡಾಗಿದೆ ಟೆಸ್ಲಾದ ಸ್ವಯಂಚಾಲಿತ ಕಾರು, ಇಬ್ಬರನ್ನು ಬಲಿ ಪಡೆದ ಭಯಾನಕ ವಿಡಿಯೋ ವೈರಲ್‌…!

ಟೆಸ್ಲಾ ಸ್ವಯಂಚಾಲಿತ ಕಾರು ಮತ್ತೊಮ್ಮೆ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚೀನಾದಲ್ಲಿ ನಡೆದಿರೋ ಈ ಭಯಾನಕ ಅಪಘಾತದ ವಿಡಿಯೋ ಕೂಡ ವೈರಲ್‌ ಆಗಿದೆ. ಬ್ರೇಕ್ ಸಿಸ್ಟಮ್ ಇದ್ದಕ್ಕಿದ್ದಂತೆ ವಿಫಲಗೊಂಡಿದ್ದರಿಂದ ಕಾರು ಅಪಘಾತಕ್ಕೀಡಾಗಿದೆ.

ಚೀನಾದ ಗುವಾಂಗ್‌ಡಾಂಗ್‌ನಲ್ಲಿ ಈ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಚಲಿಸ್ತಾ ಇದ್ದ ಟೆಸ್ಲಾದ ಸ್ವಯಂಚಾಲಿತ Y ಮಾಡೆಲ್ ಕಾರು, ಇದ್ದಕ್ಕಿದ್ದಂತೆ ಕಂಟ್ರೋಲ್‌ ತಪ್ಪಿದೆ. ಕಾರಿಗೆ ಬ್ರೇಕ್‌ ಬೀಳಲೇ ಇಲ್ಲ. ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲ ಡಿಕ್ಕಿ ಹೊಡೆಯುತ್ತ ಮುಂದೆ ಸಾಗಿದೆ. ನಂತರ ಕಾರು ಸ್ಫೋಟಗೊಂಡು ನಿಂತಿದೆ. ಕಾರು ಯರ್ರಾಬಿರ್ರಿ ಚಲಿಸಿದ್ದರಿಂದ ಸರಣಿ ಅನಾಹುತಗಳು ಸಂಭವಿಸಿವೆ. ಹಲವಾರು ವಾಹನಗಳಿಗೆ ಈ ಕಾರು ಡಿಕ್ಕಿ ಹೊಡೆದಿದೆ. ಪಾದಚಾರಿಗಳಿಗೂ ಗುದ್ದಿದೆ.

ಕೊನೆಯಲ್ಲಿ ರಸ್ತೆ ಬದಿಯ ಕಟ್ಟಡವೊಂದರ ಅಂಚಿಗೆ ಡಿಕ್ಕಿ ಹೊಡೆದು ಜೋರಾಗಿ ಸ್ಫೋಟಿಸಿದೆ. ಸ್ಫೋಟದ ಬಳಿಕ ಕಾರು ಮುಂದಕ್ಕೆ ಚಲಿಸಿಲ್ಲ. ಆದ್ರೆ ಅಷ್ಟರಲ್ಲಾಗ್ಲೇ ಈ ಆಟೋಮ್ಯಾಟಿಕ್‌ ಕಾರಿಗೆ ಸಿಲುಕಿ ಇಬ್ಬರು ಮೃತಪಟ್ಟಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರು ಸ್ಫೋಟಗೊಂಡ ಬಳಿಕ ಸುತ್ತಲೂ ಭಾರೀ ಬೆಂಕಿ ಮತ್ತು ಹೊಗೆ ಆವರಿಸಿತ್ತು. ಹೊಗೆ ತಾಳಲಾರದೆ ಹಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments