ಚಿಂತೆ ಇಲ್ಲದೇ ಭರ್ಜರಿಯಾಗಿ ಕುಣಿದ ಮಹಿಳೆ, ವಿಡಿಯೋ ವೈರಲ್

ಆಕೆಯು ಹಿಂದಿ ಮತ್ತು ಪಂಜಾಬಿ ಹಾಡುಗಳಿಗೆ ನಿರಾತಂಕವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದೆ. ಯಾರೂ ತಮ್ಮನ್ನು ನೋಡುತ್ತಾರೋ, ಏನೆಂದುಕೊಳ್ಳುತ್ತಾರೋ ಎಂಬ ಗೋಜಿಗೆ ಹೋಗದೇ ನೃತ್ಯ ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು.
ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋ 1 ಲಕ್ಷ ವೀಕ್ಷಣೆ ಗಳಿಸಿದೆ. ಅನೇಕರು ಕಾಮೆಂಟ್ ಮಾಡಿದ್ದು,ʼತನ್ನ ಸ್ವಂತ ನಿಯಮ ಮತ್ತು ಷರತ್ತುಗಳ ಮೇಲೆ ತನ್ನ ಜೀವನ ನಡೆಸುತ್ತಿರುವುದನ್ನು ನೋಡಿ ತುಂಬಾ ಸಂತೋಷವಾಗಿದೆ’ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಇದೇ ರೀತಿ ಇನ್ನೊಬ್ಬರು ಪುಷ್ಪಾ ಸಿನಿಮಾದ ಸಾಮಿ ಸಾಮಿ ಹಾಡಿಗೆ ಎನಜಿರ್ಟಿಕ್ ಆಗಿ ಡ್ಯಾನ್ಸ್ ಮಾಡಿರುವುದು ವೈರಲ್ ಆಗಿದೆ. ನೆಟ್ಟಿಗರು ಈ ವಿಡಿಯೋ ನೋಡಿ ಖುಷಿಯಿಂದ ಕಾಮೆಂಟ್ ಮಾಡಿದ್ದಾರೆ. ಕೆಲವರು ದಾದಿ ಮತ್ತು ಬಾಲಿವುಡ್ ತಾರೆ ನೋರಾ ಫತೇಹಿ ನಡುವೆ ಹೋಲಿಕೆ ಮಾಡಿದ್ದಾರೆ.