Thursday, August 11, 2022
Google search engine
HomeUncategorizedಚಾಲನೆ ಬಾರದ ಗೆಳತಿಗೆ ಕಾರು ನೀಡಿದ ಯುವಕ; ಏಕಾಏಕಿ ಎಕ್ಸಲೇಟರ್ ಒತ್ತಿದ್ದಕ್ಕೆ ಇಬ್ಬರು ಬೈಕ್ ಸವಾರರ...

ಚಾಲನೆ ಬಾರದ ಗೆಳತಿಗೆ ಕಾರು ನೀಡಿದ ಯುವಕ; ಏಕಾಏಕಿ ಎಕ್ಸಲೇಟರ್ ಒತ್ತಿದ್ದಕ್ಕೆ ಇಬ್ಬರು ಬೈಕ್ ಸವಾರರ ಬಲಿ

ಚಾಲನೆ ಬಾರದ ಗೆಳತಿಗೆ ಕಾರು ನೀಡಿದ ಯುವಕ; ಏಕಾಏಕಿ ಎಕ್ಸಲೇಟರ್ ಒತ್ತಿದ್ದಕ್ಕೆ ಇಬ್ಬರು ಬೈಕ್ ಸವಾರರ ಬಲಿ

ಯುವಕನೊಬ್ಬ ತನ್ನ ಗೆಳತಿಯನ್ನು ಮೆಚ್ಚಿಸಲು ಮಾಡಿದ ಕೆಲಸದಿಂದಾಗಿ ಇಬ್ಬರ ಜೀವ ಹೋಗಲು ಕಾರಣಕರ್ತನಾಗಿದ್ದಾನೆ. ಇಂಥದೊಂದು ಆಘಾತಕಾರಿ ಘಟನೆ ಚತ್ತೀಸ್ಗಡದ ಬಿಲಾಸ್ ಪುರದಲ್ಲಿ ನಡೆದಿದೆ.

ಘಟನೆಯ ವಿವರ: ಬಿಲಾಸ್ ಪುರದ ಮುಂಗೇಲಿ ಬಡಾವಣೆ ನಿವಾಸಿ ರವೀಂದ್ರ ಕುರ್ರೆ ಎಂಬಾತ ತನ್ನ ಗೆಳತಿಯೊಂದಿಗೆ ಜಾಲಿ ರೈಡ್ ಹೊರಟಿದ್ದಾನೆ. ಈ ವೇಳೆ ಸುಮ್ಮನಿರದ ಆತ ಆಕೆಗೆ ಚಾಲನೆ ಬಾರದಿದ್ದರೂ ಸಹ ಕಾರು ಓಡಿಸಲು ಹೇಳಿದ್ದಾನೆ. ಪಕ್ಕದಲ್ಲಿ ನಾನಿರುತ್ತೇನೆ ಎಂದು ಧೈರ್ಯ ತುಂಬಿದ್ದಾನೆ.

ಗೆಳೆಯನ ಮಾತು ಕೇಳಿ ಚಾಲಕನ ಸ್ಥಾನದಲ್ಲಿ ಕುಳಿತ ಆಕೆ ಏಕಾಏಕಿ ಎಕ್ಸಲೇಟರ್ ಒತ್ತಿದ್ದು, ಇದರಿಂದ ಎದುರಿಗೆ ಬರುತ್ತಿದ್ದ ಬೈಕ್ ಸವಾರರಿಗೆ ಕಾರು ರಭಸದಿಂದ ಡಿಕ್ಕಿ ಹೊಡೆದಿದೆ. ಬೈಕಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು ಡಿಕ್ಕಿಯ ತೀವ್ರತೆಗೆ ಮೀಟರ್ ಗಳಷ್ಟು ದೂರಕ್ಕೆ ಹೋಗಿ ಬಿದ್ದಿದ್ದಾರೆ.

ಇದರ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ತೀವ್ರವಾಗಿ ಗಾಯಗೊಂಡಿರುವ ಮತ್ತೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ನಂತರ ಸ್ಥಳೀಯರು ರವೀಂದ್ರ ಮತ್ತು ಆತನ ಗೆಳತಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments