Monday, December 5, 2022
Google search engine
HomeUncategorizedಚಾಲಕನಿಂದ ಲೈಂಗಿಕ ಕಿರುಕುಳ; ಚಲಿಸುತ್ತಿದ್ದ ಆಟೋದಿಂದ ಜಿಗಿದ ಬಾಲಕಿ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ಚಾಲಕನಿಂದ ಲೈಂಗಿಕ ಕಿರುಕುಳ; ಚಲಿಸುತ್ತಿದ್ದ ಆಟೋದಿಂದ ಜಿಗಿದ ಬಾಲಕಿ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ಚಾಲಕನಿಂದ ಲೈಂಗಿಕ ಕಿರುಕುಳ; ಚಲಿಸುತ್ತಿದ್ದ ಆಟೋದಿಂದ ಜಿಗಿದ ಬಾಲಕಿ; ಸಿಸಿ ಟಿವಿಯಲ್ಲಿ ಆಘಾತಕಾರಿ ದೃಶ್ಯ ಸೆರೆ

ಆಟೋ ಚಾಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಬಾಲಕಿ ಚಲಿಸುತ್ತಿದ್ದ ಆಟೋದಿಂದಲೇ ಹೊರಗೆ ಜಿಗಿದ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ನಡೆದಿದೆ. ಮೂಲಗಳ ಪ್ರಕಾರ ಅಪ್ರಾಪ್ತ ಬಾಲಕಿಯು ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಚಲಿಸುತ್ತಿದ್ದ ವಾಹನದಿಂದ ಹಾರಿದ್ದಾಳೆ. ಜನನಿಬಿಡ ಮುಖ್ಯ ರಸ್ತೆಯಲ್ಲಿ ಜಿಗಿದ ನಂತರ ಬಾಲಕಿ ಗಾಯಗೊಂಡಿದ್ದಾಳೆ.

ಆರೋಪಿ ಆಟೋ ಚಾಲಕನನ್ನು ಸೈಯದ್ ಅಕ್ಬರ್ ಹಮೀದ್ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಚಾಲಕನ ಅಶ್ಲೀಲ ವರ್ತನೆ ಮತ್ತು ಅಶ್ಲೀಲ ಮಾತುಗಳನ್ನು ಕೇಳಿದ ನಂತರ ಹುಡುಗಿ ವೇಗವಾಗಿ ವಾಹನದಿಂದ ಜಿಗಿದಿದ್ದಾಳೆ ಎಂದು ಮೂಲಗಳು ತಿಳಿಸಿವೆ. ತಲೆಗೆ ಪೆಟ್ಟಾಗಿದ್ದ ಆಕೆಯನ್ನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಾಲಕನ ಕೃತ್ಯದಿಂದ ತಪ್ಪಿಸಿಕೊಳ್ಳಲು ಬಾಲಕಿ ಆಟೋದಿಂದ ಜಿಗಿದ ದೃಶ್ಯ ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯ ನಂತರ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಆರೋಪಿಯನ್ನು ಬಂಧಿಸಲು ತಕ್ಷಣ ಕಾರ್ಯಾಚರಣೆಯನ್ನು ನಡೆಸಲಾಯಿತು. ನವೆಂಬರ್ 13 ರಂದು ಟ್ಯೂಷನ್ ಮುಗಿಸಿ ಆಟೋದಲ್ಲಿ ಮನೆಗೆ ಬರುತ್ತಿದ್ದ ಬಾಲಕಿಗೆ ಆಟೋರಿಕ್ಷಾದಲ್ಲಿ ಕಿರುಕುಳ ನೀಡಲಾಗಿತ್ತು. ಔರಂಗಾಬಾದ್‌ನ ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕೃತ ಹೇಳಿಕೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಗಣಪತ್ ದಾರಾಡೆ, ಅಪ್ರಾಪ್ತ ವಿದ್ಯಾರ್ಥಿನಿ ಉಸ್ಮಾನ್‌ಪುರ ಪ್ರದೇಶದಿಂದ ಆಟೋರಿಕ್ಷಾದಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಚಾಲಕ ಅಶ್ಲೀಲವಾಗಿ ಮಾತನಾಡಿ ಬಾಲಕಿಗೆ ಕಿರುಕುಳ ನೀಡಿದ್ದಾನೆ. ಅದೇ ಸಮಯದಲ್ಲಿ ಔರಂಗಾಬಾದ್‌ನ ಸಿಲ್ಲಿ ಖಾನಾ ಕಾಂಪ್ಲೆಕ್ಸ್ ಬಳಿ ಚಲಿಸುತ್ತಿದ್ದ ಆಟೋದಿಂದ ಹೊರಗೆ ಹಾರಿದ್ದು, ಬಾಲಕಿಯ ತಲೆಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments