Friday, October 7, 2022
Google search engine
HomeUncategorizedಚರ್ಚ್ ನಲ್ಲೇ ಆಘಾತಕಾರಿ ಘಟನೆ: ಮಹಿಳೆಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ

ಚರ್ಚ್ ನಲ್ಲೇ ಆಘಾತಕಾರಿ ಘಟನೆ: ಮಹಿಳೆಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ

ಚರ್ಚ್ ನಲ್ಲೇ ಆಘಾತಕಾರಿ ಘಟನೆ: ಮಹಿಳೆಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯ

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚರ್ಚ್ ನಲ್ಲಿ ಮಹಿಳೆಗೆ ಚಾಕು ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಸೆ. 10 ರಂದು ರಾತ್ರಿ 9.30 ಕ್ಕೆ ಮನೆಯ ಸಮೀಪದ ಚರ್ಚ್ ನಲ್ಲಿ ಲೈಟ್ ಆಫ್ ಮಾಡಲು ಹೋಗಿದ್ದ ಮಹಿಳೆಗೆ ವಿಲಿಯಂ ಪ್ರಕಾಶ ಎಂಬಾತ ಚಾಕು ತೋರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ. ಮಹಿಳೆಯ ಪತಿ ಚರ್ಚ್ ನಲ್ಲಿ ಕೆಲಸ ಮಾಡುತ್ತಿದ್ದು, ಅವರು ವಿಶ್ರಾಂತಿಗೆ ಮನೆಗೆ ಬಂದಿದ್ದರು. ಅವರ ಬದಲಿಗೆ ಮಹಿಳೆ ಲೈಟ್ ಆಫ್ ಮಾಡಲು ಒಬ್ಬರೇ ಹೋಗಿದ್ದು, ಆಕೆಯನ್ನು ಹಿಂಬಾಲಿಸಿಕೊಂಡು ಬಂದ ವಿಲಿಯಂ ಪ್ರಕಾಶ್ ಚಾಕು ತೋರಿಸಿ ಬೆದರಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.

ಆಕೆ ಕೂಗಾಡಿದಾಗ ಕೊಲೆ ಬೆದರಿಕೆ ಹಾಕಿ ತಳ್ಳಿ ಪರಾರಿಯಾಗಿದ್ದಾನೆ. ಪತ್ನಿಯ ಕೂಗಾಟ ಕೇಳಿ ಪತಿ ಮನೆಯಿಂದ ಹೊರಗೆ ಬಂದಿದ್ದು, ಆತನನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments