Tuesday, September 27, 2022
Google search engine
HomeUncategorizedಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ತಡವಾಗಿ ಗೇಟ್​ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೈಟಿಯ ಸೆಕ್ಯುರಿಟಿ ಗಾರ್ಡ್​ ಮೇಲೆ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರನ್ನು ಬಂಧಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ.

ಹೊಸ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಈ ಪ್ರಕರಣವು ನೋಯ್ಡಾ ಸೆಕ್ಟರ್​ 121 ರಲ್ಲಿ ಹಂತ 3 ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ.

ನೋಯ್ಡಾದ ಕ್ಲಿಯೋ ಕೌಂಟಿ ಸೊಸೆೈಟಿಯ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಗೆ ಹಲವು ಬಾರಿ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು.

ಮಹಿಳೆ ವೃತ್ತಿಯಲ್ಲಿ ಪ್ರೊಫೆಸರ್​ ಎಂದು ಹೇಳಲಾಗಿದ್ದು, ಸಣ್ಣ ಜಗಳದ ನಂತರ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದ್ದಾಳೆ, ಇದೀಗ ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದೆ.

ಮೂವರು ಸೆಕ್ಯುರಿಟಿ ಗಾರ್ಡ್​ಗಳು ಗೇಟ್ ​ಬಳಿ ಇದ್ದು, ಇಬ್ಬರು ಏನೋ ಚರ್ಚೆ ನಡೆಸುತ್ತಿದ್ದಾಗ ಒಬ್ಬ ಸೆಕ್ಯುರಿಟಿ ಗಾರ್ಡ್​ ಕಪಾಳಕ್ಕೆ ಮಹಿಳೆ ಬಾರಿಸುವುದು ಕಾಣಿಸುತ್ತದೆ. ಆತ ಏನೋ ಸಮಜಾಯಿಷಿ ಕೊಡುತ್ತಿದ್ದರೂ ಅದನ್ನು ಕೇಳುವ ವ್ಯವಧಾನ ಆಕೆಗಿರಲಿಲ್ಲ.

ಕಳೆದ ತಿಂಗಳು ಭವ್ಯಾ ರೆೈ ಎಂಬ ಮಹಿಳೆ ಗೇಟ್​ ತಡವಾಗಿ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೆೈಟಿಯ ಅಸಹಾಯಕ ಸೆಕ್ಯುರಿಟಿ ಗಾರ್ಡ್​ನ ಮೇಲೆ ನಿಂದನೆಯನ್ನು ಮಾಡಿದ್ದು, ಬಳಿಕ ಆಕೆಯನ್ನು ಬಂಧಿಸಿ 14 ದಿನಗಳ ಕಾಲ ಕಸ್ಟಡಿಯಲ್ಲಿ ಇರಿಸಲಾಗಿತ್ತು.

2 ನಿಮಿಷಗಳ ಅವಧಿಯ ವೀಡಿಯೊದಲ್ಲಿ, ಮದ್ಯದ ಅಮಲಿನಲ್ಲಿದ್ದ ರೈ, ಗಾರ್ಡ್​ನ ಕೈಯನ್ನು ಹಿಡಿದುಕೊಂಡು ದೌರ್ಜನ್ಯ ಎಸಗುತ್ತಿರುವುದು ಕಂಡುಬಂದಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments