Thursday, December 8, 2022
Google search engine
HomeUncategorizedಗುಜರಾತ್‌ ವಿಧಾನಸಭಾ ಚುನಾವಣಾ ಮೈತ್ರಿ ಕುರಿತಂತೆ ನಿತೀಶ್‌ ಕುಮಾರ್‌ ಮಹತ್ವದ ಹೇಳಿಕೆ

ಗುಜರಾತ್‌ ವಿಧಾನಸಭಾ ಚುನಾವಣಾ ಮೈತ್ರಿ ಕುರಿತಂತೆ ನಿತೀಶ್‌ ಕುಮಾರ್‌ ಮಹತ್ವದ ಹೇಳಿಕೆ

ಗುಜರಾತ್‌ ವಿಧಾನಸಭಾ ಚುನಾವಣಾ ಮೈತ್ರಿ ಕುರಿತಂತೆ ನಿತೀಶ್‌ ಕುಮಾರ್‌ ಮಹತ್ವದ ಹೇಳಿಕೆ

ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಟ್ರೈಬಲ್ ಪಾರ್ಟಿಯೊಂದಿಗೆ ಮೈತ್ರಿ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ತಗೆದುಕೊಂಡಿಲ್ಲವೆಂದು ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ತಿಳಿಸಿದೆ.

ಗುಜರಾತ್‌ನ ಭಾರತೀಯ ಟ್ರೈಬಲ್ ಪಾರ್ಟಿ (ಬಿಟಿಪಿ) ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿ ಡಿಸೆಂಬರ್ ಆರಂಭದಲ್ಲಿ ನಡೆಯಲಿರುವ ಗುಜರಾತ್ ಚುನಾವಣೆಯನ್ನು ಮೈತ್ರಿಕೂಟದಲ್ಲಿ ಎದುರಿಸಲು ಮುಂದಾಗಿದೆ. ಆದರೆ ಜನತಾ ದಳ-ಯುನೈಟೆಡ್ ಅಥವಾ ಜೆಡಿ (ಯು) ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದೆ.

ಬಿಟಿಪಿ ಅಧ್ಯಕ್ಷ ಛೋಟುಭಾಯ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಕಾ ಲಲನ್ ಸಿಂಗ್ ಅವರನ್ನು ಸಂಪರ್ಕಿಸಿದ್ದಾರೆ ಆದರೆ ಅಂತಿಮ ನಿರ್ಧಾರವಾಗಿಲ್ಲ ಎಂದು ಜೆಡಿ (ಯು) ಮುಖ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ಕೆಸಿ ತ್ಯಾಗಿ ಮಂಗಳವಾರ ತಿಳಿಸಿದ್ದಾರೆ.

JD (U) ನೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಘೋಷಿಸಲು ಮುಂದಾಗಿರುವ ಬಿಟಿಪಿ , ನಿತೀಶ್ ಕುಮಾರ್ ಅವರು ಗುಜರಾತ್‌ನಲ್ಲಿ ತಮ್ಮ ಪಕ್ಷದ ಪರವಾಗಿ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದೆ.

BTP ಈ ವರ್ಷದ ಮೇ ತಿಂಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (ಎಎಪಿ) ನೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಘೋಷಿಸಿತ್ತು. ಆದರೆ ಒಪ್ಪಂದವು ನಾಲ್ಕು ತಿಂಗಳ ಕಾಲ ಉಳಿಯಲಿಲ್ಲ. ಆಗಸ್ಟ್‌ನಲ್ಲಿ ಬಿಟಿಪಿ ಅಧ್ಯಕ್ಷ ಛೋಟುಭಾಯ್ ವಾಸವ ಏಕಪಕ್ಷೀಯವಾಗಿ ಅದನ್ನು ರದ್ದುಗೊಳಿಸಿದರು ಮತ್ತು ತಮ್ಮ ಪಕ್ಷವು ರಾಜ್ಯದ ಎಲ್ಲಾ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಿದ್ದರು.

ಗುಜರಾತ್‌ನ 182 ಸ್ಥಾನಗಳಿಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಜೆಡಿಯು 2017ರಲ್ಲಿ ಗುಜರಾತ್‌ನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments