Thursday, August 11, 2022
Google search engine
HomeUncategorizedಗರ್ಭಪಾತ ವಿರೋಧಿ ಸ್ಪೀಕರ್‌ ಭಾಷಣ ಆರಂಭಿಸುತ್ತಿದ್ದಂತೆ ‌ʼವಾಕ್‌ ಔಟ್‌ʼ ಮಾಡಿದ ಮೆಡಿಕಲ್‌ ವಿದ್ಯಾರ್ಥಿಗಳು…! ವಿಡಿಯೋ ವೈರಲ್

ಗರ್ಭಪಾತ ವಿರೋಧಿ ಸ್ಪೀಕರ್‌ ಭಾಷಣ ಆರಂಭಿಸುತ್ತಿದ್ದಂತೆ ‌ʼವಾಕ್‌ ಔಟ್‌ʼ ಮಾಡಿದ ಮೆಡಿಕಲ್‌ ವಿದ್ಯಾರ್ಥಿಗಳು…! ವಿಡಿಯೋ ವೈರಲ್

ಗರ್ಭಪಾತ ವಿರೋಧಿ ಸ್ಪೀಕರ್‌ ಭಾಷಣ ಆರಂಭಿಸುತ್ತಿದ್ದಂತೆ ‌ʼವಾಕ್‌ ಔಟ್‌ʼ ಮಾಡಿದ ಮೆಡಿಕಲ್‌ ವಿದ್ಯಾರ್ಥಿಗಳು…! ವಿಡಿಯೋ ವೈರಲ್

ಅಮೆರಿಕಾದಲ್ಲಿ ಗರ್ಭಪಾತ ವಿಷಯ ಈಗ ಬಹುದೊಡ್ಡ ಚರ್ಚಾ ವಿಷಯ. ಈ ವಿಷಯದಲ್ಲಿ ಅಲ್ಲಿನ ಬೆಳವಣಿಗೆಯು ಜಗತ್ತಿನ ಗಮನ ಸೆಳೆದಿದೆ.

ಇತ್ತೀಚೆಗೆ ನಡೆದ ಬೆಳವಣಿಗೆಯಲ್ಲಿ ಮಿಚಿಗನ್​ ವಿಶ್ವವಿದ್ಯಾಲಯದ ಮೆಡಿಕಲ್​ ಸ್ಕೂಲ್​ ಫ್ರೆಶರ್ಸ್‌ ಗಳು ತಮ್ಮ ಸ್ವಾಗತ ಪರಿಚಯ ಕಾರ್ಯಕ್ರಮದಿಂದ ವಾಕ್ ​ಔಟ್​ ಮಾಡಿರುವ ಪ್ರಸಂಗ ನಡೆದಿದೆ. ಗರ್ಭಪಾತ ವಿರೋಧಿ ಸ್ಪೀಕರ್​ ವೇದಿಕೆಯಲ್ಲಿ ತನ್ನ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ, ವಿದ್ಯಾರ್ಥಿಗಳು ಹೊರನಡೆದಿದ್ದಾರೆ.

ಈ ಕಾರ್ಯಕ್ರಮಕ್ಕೆ ಗರ್ಭಪಾತ ವಿರೋಧಿ ಕಾನೂನು ಬೆಂಬಲಿಗರಾದ ಡಾ. ಕ್ರಿಸ್ಟಿನ್​ ಕೊಲಿಯರ್​ ಅವರನ್ನು ಸ್ಪೀಕರ್​ ಆಗಿ ಆಹ್ವಾನಿಸಲಾಗಿತ್ತು. ಈ ಮುಖ್ಯ ಭಾಷಣಕಾರರ ಆಹ್ವಾನದ ವಿರುದ್ಧ ಪ್ರತಿಭಟಿಸಲು ವಿದ್ಯಾರ್ಥಿಗಳನ್ನು ವಾಕ್​ ಔಟ್​ ಮಾಡಲು ಪ್ರೇರೇಪಿಸಿತು. ಈ ವಾಕ್​ ಔಟ್​ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಯುಎಸ್​ ನ್ಯಾಯಾಲಯವು ಗರ್ಭಪಾತದ ಹಕ್ಕನ್ನು ಸಂರ್ಪೂಣವಾಗಿ ತೆಗೆದುಹಾಕಿದೆ, ಅದರ ಮೇಲೆ ನಿಷೇಧವನ್ನು ಜಾರಿಗೊಳಿಸಲು ರಾಜ್ಯಗಳಿಗೆ ಅವಕಾಶ ನೀಡಿದೆ. ಇದು ದೊಡ್ಡ ಪ್ರಮಾಣದಲ್ಲಿ ಸಂಚಲನ ಮೂಡಿಸಿದ್ದು, ತೀವ್ರ ವಿರೋಧ ಕಾಣಿಸಿದೆ. ಇದರ ಪರಿಣಾಮ ವೈದ್ಯಕಿಯ ಕೋರ್ಸ್​ನ ಪರಿಚಯ ಕಾರ್ಯಕ್ರಮದ ಮೇಲೂ ಆಯಿತು.

ಈಗ ವೈರಲ್​ ಆಗಿರುವ ವಿಡಿಯೊದಲ್ಲಿ, ಮಿಚಿಗನ್​ ಮೆಡಿಕಲ್​ ಸ್ಕೂಲ್​ ಸಭಾಂಗಣದ ವೇದಿಕೆಗೆ ಡಾ. ಕೊಲಿಯರ್​ ಪ್ರವೇಶಿಸುತ್ತಿದ್ದಂತೆ ವಿದ್ಯಾರ್ಥಿಗಳು ಸಾಲುಗಟ್ಟಿ ಅಲ್ಲಿಂದ ಎದ್ದು ಹೊರಹೋಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ವೈರಲ್​ ವಿಡಿಯೋಗೆ ಸಾಕಷ್ಟು ಕಾಮೆಂಟ್​ ಬಂದಿದ್ದು, ಕೆಲವರು ಈ ಕ್ರಮವು ಎಷ್ಟು ಧೈರ್ಯಶಾಲಿ ಎಂದು ಶ್ಲಾಘಿಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments