Tuesday, September 27, 2022
Google search engine
HomeUncategorizedಗಮನಿಸಿ: ಇಂದು ಬಸ್ ಸಂಚಾರದಲ್ಲಿ ವ್ಯತ್ಯಯ; ಕಲ್ಯಾಣ ಕರ್ನಾಟಕ ಉತ್ಸವಕ್ಕೆ 300 ಬಸ್

ಗಮನಿಸಿ: ಇಂದು ಬಸ್ ಸಂಚಾರದಲ್ಲಿ ವ್ಯತ್ಯಯ; ಕಲ್ಯಾಣ ಕರ್ನಾಟಕ ಉತ್ಸವಕ್ಕೆ 300 ಬಸ್

ಗಮನಿಸಿ: ಇಂದು ಬಸ್ ಸಂಚಾರದಲ್ಲಿ ವ್ಯತ್ಯಯ; ಕಲ್ಯಾಣ ಕರ್ನಾಟಕ ಉತ್ಸವಕ್ಕೆ 300 ಬಸ್

ಕಲಬುರಗಿ: ಸೆಪ್ಟೆಂಬರ್ 17 ರಂದು ಕಲ್ಯಾಣ ಕರ್ನಾಟಕ ಉತ್ಸವ ಜರುಗಲಿರುವ ಪ್ರಯುಕ್ತ ಕಲಬುರಗಿ ವಿಭಾಗ-2  ಹಾಗೂ ವಿಭಾಗ-1 ರಿಂದ ಕರಾರು ಒಪ್ಪಂದದ ಮೇಲೆ ಸುಮಾರು 300 ಸಾರಿಗೆ ಬಸ್ಸುಗಳು ನೀಡಲಾಗಿದೆ.

ಆದ್ದರಿಂದ ನಿಗಮದ ಕಲಬುರಗಿ ವಿಭಾಗ-2 ರಿಂದ ಕಾರ್ಯಾಚರಣೆಯಾಗುವ ಬಸ್‍ಗಳು ಅಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೂ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕ ಪ್ರಯಾಣಿಕರು ಇದಕ್ಕೆ ಸಹಕರಿಸಬೇಕೆಂದು ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ನಿಗಮ ವಿಭಾಗ-2ರ ವ್ಯಾಪ್ತಿಯಲ್ಲಿ ಬರುವ ಕಲಬುರಗಿ, ಆಳಂದ, ಜೇವರ್ಗಿ, ಯಡ್ರಾಮಿ ಅಪಜಲಪುರ, ಸೇಡಂ, ಕಾಳಗಿ, ಚಿಂಚೋಳ್ಳಿ, ಹಾಗೂ ಚಿತಾಪೂರ ತಾಲೂಕುಗಳ ಸಾರ್ವಜನಿಕ ಪ್ರಯಾಣಿಕರು ಇದಕ್ಕೆ ಸಹಕರಿಸಬೇಕು. ನಂತರ ಅಂದು ಮಧ್ಯಾಹ್ನ 2 ಗಂಟೆಯಿಂದ ಯಥಾ ಪ್ರಕಾರ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments