Tuesday, September 27, 2022
Google search engine
HomeUncategorizedಗಟಾರದಲ್ಲಿ ಬಿದ್ದ ಏರ್​ ಪಾಡ್​ ಎತ್ತಲು ಅಂಕಲ್​ ಸಾಹಸ; ಮುಂದೇನಾಯ್ತು ಗೊತ್ತಾ‌ ?

ಗಟಾರದಲ್ಲಿ ಬಿದ್ದ ಏರ್​ ಪಾಡ್​ ಎತ್ತಲು ಅಂಕಲ್​ ಸಾಹಸ; ಮುಂದೇನಾಯ್ತು ಗೊತ್ತಾ‌ ?

ಗಟಾರದಲ್ಲಿ ಬಿದ್ದ ಏರ್​ ಪಾಡ್​ ಎತ್ತಲು ಅಂಕಲ್​ ಸಾಹಸ; ಮುಂದೇನಾಯ್ತು ಗೊತ್ತಾ‌ ?

ಸಾಮಾಜಿಕ ಜಾಲತಾಣದಲ್ಲಿ ರಂಜನೀಯ ವಿಡಿಯೋಗಳಿಗೇನು ಕೊರತೆ ಇರದು. ಇಲ್ಲೊಂದು ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬರು ಗಟಾರದಲ್ಲಿ ಬಿದ್ದ ಏರ್​ಪಾಡ್​ ಅನ್ನು ಎತ್ತಿಕೊಳ್ಳಲು ಪ್ರಯತ್ನಿಸಿ ವಿಫಲರಾದದ್ದನ್ನು ತೋರಿಸುತ್ತದೆ.

ಆಪಲ್​ ಉತ್ಪನ್ನಗಳು ಅತ್ಯಂತ ದುಬಾರಿ ಗ್ಯಾಜೆಟ್​ಗಳಾಗಿವೆ. ರಸ್ತೆ ಮೇಲೆ ಅವು ಆಕಸ್ಮಿಕವಾಗಿ ಕಣ್ಣಿಗೆ ಬಿದ್ದರೆ ಅದು ಚಿನ್ನದಂತೆಯೇ ತೋರುತ್ತದೆ. ಕಿಂಡಲ್​ ಮಾಡಿರುವ ಶೀರ್ಷಿಕೆಯೊಂದಿಗೆ ಹಂಚಿಕೊಂಡ ರೀಲ್​ 50.6 ಮಿಲಿಯನ್​ ವೀಕ್ಷಣೆ ಕಂಡಿದೆ. 2.5 ಮಿಲಿಯನ್​ ಲೈಕ್​ ಸಹ ಪಡೆದುಕೊಂಡಿದೆ.

ವಿಡಿಯೊದಲ್ಲಿ, ಒಬ್ಬ ವ್ಯಕ್ತಿಯು ಡ್ರೈನ್​ ಮೇಲೆ ಬಾಗಿ ಅದರಲ್ಲಿ ಬಿದ್ದ ಏರ್​ಪಾಡ್​ ಅನ್ನು ಎತ್ತಿಕೊಳ್ಳಲು ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. ಆ ವ್ಯಕ್ತಿಯು ತಂತಿಯನ್ನು ಬಳಸುವ ಮೂಲಕ ಇಯರ್​ಫೋನ್​ ಅನ್ನು ಯಶಸ್ವಿಯಾಗಿ ಹೊರತೆಗೆಯುವುದನ್ನು ನೋಡಬಹುದು. ಆದರೆ ಇನ್ನೇನು ಕೈ ಸೇರಿತೆನ್ನುವಾಗ ಅದು ಮತ್ತೆ ಚರಂಡಿಯಲ್ಲಿ ಬೀಳುತ್ತದೆ. ಈ ವೇಳೆ ಮನುಷ್ಯನು ತನ್ನ ತಲೆ ಮೇಲೆ ಕೈ ಹೊತ್ತುಕೊಳ್ಳುತ್ತಾನೆ. ಆತ ತನ್ನ ಪ್ರಯತ್ನದಲ್ಲಿ ಸೋತಂತೆ ಕಾಣುತ್ತಾನೆ, ಇದೇ ವೇಳೆ ಆತನ ಹತ್ತಿರ ನಿಂತಿರುವ ಮಗು ಅವನನ್ನು ನೋಡಿ ನಗುವುದನ್ನು ಕಾಣಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments