Wednesday, August 17, 2022
Google search engine
HomeUncategorizedಖಾಕಿ ತನಿಖೆಯಲ್ಲಿ ಬಯಲಾಯ್ತು ದಾರಿ ತಪ್ಪಿದ್ದ ಪತ್ನಿಯ ಹೀನ ಕೃತ್ಯ: ಅಪಘಾತಕ್ಕೆ ಸ್ಪೋಟಕ ತಿರುವು, ಪ್ರಿಯಕರನೊಂದಿಗೆ...

ಖಾಕಿ ತನಿಖೆಯಲ್ಲಿ ಬಯಲಾಯ್ತು ದಾರಿ ತಪ್ಪಿದ್ದ ಪತ್ನಿಯ ಹೀನ ಕೃತ್ಯ: ಅಪಘಾತಕ್ಕೆ ಸ್ಪೋಟಕ ತಿರುವು, ಪ್ರಿಯಕರನೊಂದಿಗೆ ಸೇರಿ ಪತಿಗೆ ಇಟ್ಲು ಮುಹೂರ್ತ

ಖಾಕಿ ತನಿಖೆಯಲ್ಲಿ ಬಯಲಾಯ್ತು ದಾರಿ ತಪ್ಪಿದ್ದ ಪತ್ನಿಯ ಹೀನ ಕೃತ್ಯ: ಅಪಘಾತಕ್ಕೆ ಸ್ಪೋಟಕ ತಿರುವು, ಪ್ರಿಯಕರನೊಂದಿಗೆ ಸೇರಿ ಪತಿಗೆ ಇಟ್ಲು ಮುಹೂರ್ತ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕು ಕಮತಗಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದೆ.

ಬೈಕ್ ಸವಾರನಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದ್ದ ಪ್ರಕರಣ ಪೊಲೀಸರ ತನಿಕೆಯಲ್ಲಿ ಮತ್ತೊಂದು ತಿರುವು ಪಡೆದುಕೊಂಡಿದೆ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿರುವುದು ಪೊಲೀಸರು ತನಿಖೆಯಲ್ಲಿ ಗೊತ್ತಾಗಿದೆ.

ಪ್ರವೀಣ್ ಮೃತಪಟ್ಟ ವ್ಯಕ್ತಿ. ಈತನ ಪತ್ನಿ ನಿತ್ಯಾ ರಾಘವೇಂದ್ರನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದು, ಬೈಕ್ ನಲ್ಲಿ ತೆರಳುತ್ತಿದ್ದ ಪತಿ ಪ್ರವೀಣ್ ಗೆ ಕಾರ್ ನಿಂದ ಡಿಕ್ಕಿ ಹೊಡಿಸಿ ಪರಾರಿಯಾಗಿದ್ದರು. ಅಪಘಾತವಾಗಿರುವ ಬಗ್ಗೆ ಪತ್ನಿಗೆ ಕರೆ ಮಾಡಿ ಪ್ರವೀಣ್ ಮಾಹಿತಿ ನೀಡಿದ್ದು, ಕಾರ್ ತಿರುಗಿಸಿಕೊಂಡು ಬಂದ ಪತ್ನಿ, ಪ್ರಿಯಕರ ಮತ್ತೆ ಪ್ರವೀಣ್ ಗೆ ಡಿಕ್ಕಿ ಹೊಡೆಸಿ ಸಾಯಿಸಿದ್ದಾರೆ. ಅಮೀನಗಢ ಠಾಣೆ ಪೊಲೀಸರು ಬೈಕ್ ಬಿದ್ದ ಜಾಗ, ಶವದ ಮೇಲಿನ ಗಾಯ ಗಮನಿಸಿ ಕೊಲೆ ಶಂಕೆ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದು, ಕೊಲೆ ರಹಸ್ಯ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments