Saturday, November 26, 2022
Google search engine
HomeUncategorizedಕ್ಯಾಮೆರಾ ಜತೆ ಹಕ್ಕಿ ಪರಾರಿ, ಇಡೀ ದೃಶ್ಯ ಸೆರೆ: ವೈರಲ್​ ವಿಡಿಯೋ ಕಂಡು ನೆಟ್ಟಿಗರ ಅಚ್ಚರಿ

ಕ್ಯಾಮೆರಾ ಜತೆ ಹಕ್ಕಿ ಪರಾರಿ, ಇಡೀ ದೃಶ್ಯ ಸೆರೆ: ವೈರಲ್​ ವಿಡಿಯೋ ಕಂಡು ನೆಟ್ಟಿಗರ ಅಚ್ಚರಿ

ಕ್ಯಾಮೆರಾ ಜತೆ ಹಕ್ಕಿ ಪರಾರಿ, ಇಡೀ ದೃಶ್ಯ ಸೆರೆ: ವೈರಲ್​ ವಿಡಿಯೋ ಕಂಡು ನೆಟ್ಟಿಗರ ಅಚ್ಚರಿ

ಪ್ರಾಣಿ-ಪಕ್ಷಿಗಳ ಫೋಟೋ, ವಿಡಿಯೋ ತೆಗೆಯುವುದು ಎಂದರೆ ಸುಲಭದ ಮಾತಲ್ಲ. ಒಂದೇ ಒಂದು ಫೋಟೋಗಾಗಿ ವರ್ಷಗಟ್ಟಲೆ ಕಣ್ಣಲ್ಲಿ ಕಣ್ಣಿಟ್ಟು, ನಿದ್ದೆಗೆಡುವ ಛಾಯಾಚಿತ್ರಕಾರರು ಇದ್ದಾರೆ. ತಾಳ್ಮೆಯಿದ್ದರೆ ಮಾತ್ರ ಇಂಥ ಫೋಟೋ, ವಿಡಿಯೋ ತೆಗೆಯಲು ಸಾಧ್ಯ.

ಟ್ವಿಟರ್‌ನ ಇತ್ತೀಚಿನ ವೈರಲ್ ಆಗಿರುವ ವಿಡಿಯೋ ಒಂದು ಮಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿದೆ. ಹರಸಾಹಸ ಪಟ್ಟು ವಿಭಿನ್ನ ರೀತಿಯ ವನ್ಯಜೀವಿಗಳ ಫೋಟೋ, ವಿಡಿಯೋ ತೆಗೆದಿರುವುದನ್ನು ನೀವು ನೋಡಬಹುದು. ಪಕ್ಷಿ-ಪ್ರಾಣಿ ಪ್ರಪಂಚದ ಅತ್ಯಂತ ಆಸಕ್ತಿಕರ ವಿಡಿಯೋಗಳನ್ನು ಈ ಸಾಹಸಮಯಿ ಛಾಯಾಚಿತ್ರಕಾರರಿಂದ ಸಾಮಾಜಿಕ ಜಾಲತಾಣದಲ್ಲಿ ವೀಕ್ಷಿಸಿರಬಹುದು. ಆದರೆ ಇವೆಲ್ಲವುಗಳಿಗಿಂತಲೂ ಭಿನ್ನವಾಗಿದೆ ಈ ವೈರಲ್​ ವಿಡಿಯೋ.

ಇಲ್ಲಿ ಹಕ್ಕಿಯೊಂದು ಕ್ಯಾಮೆರಾಮನ್​ ಅವರ ಕ್ಯಾಮೆರಾವನ್ನೇ ಕಿತ್ತುಕೊಡು ಪರಾರಿಯಾಗಿದ್ದು, ಇದರ ವಿಡಿಯೋ ಇದಾಗಿದೆ. ಕ್ಯಾಮೆರಾದ ಜತೆ ಹಕ್ಕಿ ಚಲಿಸಿದೆ. ನಂತರ ಹಕ್ಕಿ ತನ್ನ ಕೊಕ್ಕಿನಲ್ಲಿ ಕ್ಯಾಮೆರಾ ಹಿಡಿದುಕೊಂಡಿದೆ. ಕೊನೆಗೂ ಇದನ್ನು ಪಡೆದುಕೊಳ್ಳುವಲ್ಲಿ ಛಾಯಾಚಿತ್ರಕಾರರು ಯಶಸ್ವಿಯಾಗಿದ್ದಾರೆ.

ಕ್ಯಾಮೆರಾದ ಜತೆ ಹಕ್ಕಿ ಹಾರಿರುವ ದೃಶ್ಯ ಸೆರೆಯಾಗಿದ್ದು, ಅದನ್ನು ನೋಡಿದರೆ ಡ್ರೋನ್ ಥರ ಕಾಣಿಸುತ್ತಿದೆ. ಈ ಅದ್ಭುತ ವಿಡಿಯೋ ಇದಾಗಲೇ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments