Monday, December 5, 2022
Google search engine
HomeUncategorizedಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ಕ್ಯಾನ್‌ ನಿಂದ ಬಿಯರ್‌ ಹೀರಿದ ಮಂಗ; ಇದರ ವರ್ತನೆಯಿಂದ ಸಾಕಾಗಿದ್ದಾನೆ ಮದ್ಯದಂಗಡಿ ಮಾಲೀಕ…!

ರಾಯ್ಬರೇಲಿ: ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಯೊಂದು ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಂಗವೊಂದು ಕ್ಯಾನ್‌ನಿಂದ ಬಿಯರ್ ಕುಡಿಯುತ್ತಿರುವುದು ಕಂಡು ಬಂದಿದೆ. ಈ ಕೋತಿ, ಹತ್ತಿರದ ವೈನ್ ಶಾಪ್‌ಗೆ ನುಗ್ಗಿ ಸಿಕ್ಕವರ ಕೈಯಿಂದ ಮದ್ಯವನ್ನು ಕಸಿದುಕೊಂಡು ಕುಡಿಯುತ್ತಿದೆ !

ಪ್ರತಿದಿನವೂ ಈ ಶರಾಬಿ ಮಂಗ ಇದೇ ರೀತಿ ಮಾಡುತ್ತಿದ್ದು, ಅಂಗಡಿಯಾತ ಕೋತಿಯ ವರ್ತನೆಯಿಂದ ಬೇಸತ್ತಿದ್ದಾನೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಅಂಗಡಿಗೆ ಬರುವ ಖರೀದಿದಾರರಿಂದ ಮದ್ಯವನ್ನು ಕೋತಿ ಕಸಿದುಕೊಳ್ಳುತ್ತಿದೆ. ಅದು ಸಿಗದಿದ್ದಾಗ ಅಂಗಡಿಯಿಂದ ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತದೆ ಎಂದು ದೂರಿನಲ್ಲಿ ಆತ ತಿಳಿಸಿದ್ದಾನೆ.

ಆದರೆ ಅಧಿಕಾರಿಗಳೂ ಅಸಹಾಯಕರಾಗಿದ್ದು, ಬೇರೆಡೆ ಅಂಗಡಿ ಇಡುವಂತೆ ಸೂಚಿಸಿದ್ದಾರೆ ! ಅನುರಾಗ್ ಮಿಶ್ರಾ ಎಂಬ ಟ್ವಿಟ್ಟರ್ ಬಳಕೆದಾರರು ಅಕ್ಟೋಬರ್ 30 ರಂದು “ರಾಯಬರೇಲಿಯಲ್ಲಿ ಕೋತಿಯೊಂದು ಮದ್ಯಪಾನ ಮಾಡುವ ವಿಡಿಯೋ ವೈರಲ್ ಆಗಿದ್ದು, ಮದ್ಯದಂಗಡಿಗೆ ಬರುವ ಜನರಿಂದ ಮದ್ಯವನ್ನು ಕಸಿದುಕೊಂಡು ಹೀರುತ್ತದೆ” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಅಪ್ಲೋಡ್ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments