Monday, December 5, 2022
Google search engine
HomeUncategorizedಕೋಳಿಮರಿ ಬಳಸಿ ಬೃಹತ್​ ಹೆಬ್ಬಾವು ಸೆರೆ ಹಿಡಿದ ಭಯಾನಕ ವಿಡಿಯೋ ವೈರಲ್​

ಕೋಳಿಮರಿ ಬಳಸಿ ಬೃಹತ್​ ಹೆಬ್ಬಾವು ಸೆರೆ ಹಿಡಿದ ಭಯಾನಕ ವಿಡಿಯೋ ವೈರಲ್​

ಕೋಳಿಮರಿ ಬಳಸಿ ಬೃಹತ್​ ಹೆಬ್ಬಾವು ಸೆರೆ ಹಿಡಿದ ಭಯಾನಕ ವಿಡಿಯೋ ವೈರಲ್​

ಹಾವುಗಳನ್ನು ಹಿಡಿಯುವುದು ಸುಲಭದ ಮಾತಲ್ಲ, ಅದರಲ್ಲಿಯೂ ಹೆಬ್ಬಾವನ್ನು ಹಿಡಿಯುವುದು ಎಂದರೆ ಸಾಮಾನ್ಯವಲ್ಲ. ಹೆಬ್ಬಾವನ್ನು ಹಿಡಿಯಲು ಕೋಳಿ ಮರಿಯನ್ನು ಬಳಸಿರುವ ಭಯಾನಕ ವಿಡಿಯೋ ಒಂದು ವೈರಲ್​ ಆಗಿದೆ.

ಕೆರೆಯಲ್ಲಿ ಇರುವ ಹೆಬ್ಬಾವು ಅಷ್ಟು ಸುಲಭದಲ್ಲಿ ಸಿಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋಳಿಮರಿಯನ್ನು ಬಳಸಿ ಹೆಬ್ಬಾವಿಗೆ ಕೊನೆಗೂ ಬಲೆ ಬೀಸಲಾಗಿದೆ. ಈ ವಿಡಿಯೋದಲ್ಲಿ ಕೋಳಿಮರಿಯನ್ನು ಕಟ್ಟಿಹಾಕಿರುವುದನ್ನು ನೋಡಬಹುದು. ಕೋಳಿಮರಿಯ ಕಾಲು ಕಟ್ಟಿಹಾಕಿ ಇಡಲಾಗಿದ್ದು, ಅಲ್ಲಿ ಹೆಬ್ಬಾವು ಬರುವಂತೆ ಮಾಡಲಾಗಿದೆ.

ತನ್ನ ಬೇಟೆ ಸಿಕ್ಕೇ ಬಿಟ್ಟಿತು ಎಂದು ಖುಷಿಯಿಂದ ಹೆಬ್ಬಾವು ಬರುತ್ತದೆ. ಅದಕ್ಕೆ ಬಲೆ ಬೀಸಲು ದೊಡ್ಡ ಕೊಳವೊಂದನ್ನು ಇರಿಸಲಾಗಿದೆ. ಸುತ್ತಲೂ ಬೇಲಿ ಹಾಕಲಾಗಿದ್ದು, ಹಾವು ಬೇರೆ ಕಡೆಯಿಂದ ಹೋಗುವುದು ಅಸಾಧ್ಯವೆಂಬಂತೆ ನಿರ್ಮಿಸಲಾಗಿದೆ. ಆದ್ದರಿಂದ ಕೋಳಿಮರಿಯನ್ನು ಹಿಡಿಯಲು ಹೆಬ್ಬಾವು ಆ ಕೊಳವೆಯೊಳಕ್ಕೆ ನುಗ್ಗುತ್ತದೆ.

ಕೊಳವೆಯೊಳಕ್ಕೆ ಅದು ನುಗ್ಗುತ್ತಿದ್ದಂತೆಯೇ ಹೊರಗಡೆ ಹೋಗದಂತೆ ತಡೆಯಲು ಕೂಡ ಉಪಾಯ ಮಾಡಲಾಗಿದೆ. ಅದರಂತೆ ಹಾವು ಕೊಳವೆಯಲ್ಲಿ ಸಿಕ್ಕಿಬಿದ್ದು ಹೊರಕ್ಕೂ ಬರಲಾಗದೇ ಪೇಚಿಗೆ ಸಿಲುಕಿದೆ. ಕೊನೆಗೂ ಅದನ್ನು ಸೆರೆಹಿಡಿಯಲಾಗಿದ್ದು, ಇದು ತುಂಬಾ ಹಿಂಸಾತ್ಮಕ ಕ್ರಿಯೆ ಎಂದು ಹಲವರು ಕಿಡಿ ಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments