Sunday, March 26, 2023
Google search engine
HomeUncategorizedಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ವೈದ್ಯರನ್ನು ದೇವರು ಕಳುಹಿಸಿದ ದೇವತೆಗಳು ಎಂದು ಕರೆಯಲಾಗುತ್ತದೆ. ವೈದ್ಯೋ ನಾರಾಯಣ ಹರಿಃ ಎನ್ನುವುದು ಇದಕ್ಕೇನೆ. ಆದರೆ ಇಂದು ವೈದ್ಯರು ಹಣ ಮಾಡುವ ದಂಧೆಗೆ ತೊಡಗಿಸಿಕೊಂಡಿದ್ದಾರೆ, ಹೆಣ ಕೊಡಲೂ ದುಡ್ಡು ಕೊಡಬೇಕು ಇತ್ಯಾದಿ ಆರೋಪಗಳು ಬಹಳ ಇವೆ. ಇವುಗಳ ಹೊರತಾಗಿಯೂ ವೈದ್ಯರು ದೇವರು ಎಂದೇ ನಂಬುವ ಘಟನೆಗಳೂ ಆಗಾಗ್ಗೆ ನಡೆಯುತ್ತಿರುತ್ತವೆ.

ಅಂಥ ಒಂದು ಹೃದಯಸ್ಪರ್ಶಿ ವಿಡಿಯೋ ವೈರಲ್​ ಆಗಿದೆ. ಹುಟ್ಟುತ್ತಲೇ ಅಂಗವಿಕಲರಾಗಿಯೋ ಅಥವಾ ಇನ್ನಾವುದೇ ಕಾರಣಗಳಿಂದ ಕೈ-ಕಾಲುಗಳನ್ನು ಕಳೆದುಕೊಂಡವರ ಸ್ಥಿತಿ ಊಹಿಸಿಕೊಳ್ಳುವುದು ಕಷ್ಟ. ಆದರೆ ಕೃತಕ ಕಾಲನ್ನು ಜೋಡಿಸುವ ಮೂಲಕ ಬಾಲಕನೊಬ್ಬನ ಮೊಗದಲ್ಲಿ ವೈದ್ಯರು ಮಂದಹಾಸವನ್ನು ಬೀರಿಸಿರುವ ವಿಡಿಯೋ ಇದಾಗಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಬಲೂನ್‌ಗಳಿಂದ ಅಲಂಕರಿಸಲ್ಪಟ್ಟ ಆಟಿಕೆ ಕಾರಿನ ಮೇಲೆ ವೈದ್ಯರು ಚಿಕ್ಕ ಹುಡುಗನಿಗೆ ಪ್ರಾಸ್ಥೆಟಿಕ್ ಕಾಲನ್ನು ಜೋಡಿಸುವುದನ್ನು ನೋಡಬಹುದು. ವೈದ್ಯರು ಹುಡುಗನಿಗೆ ಕಾಲನ್ನು ಹೊಂದಿಸುತ್ತಿದ್ದಂತೆಯೇ ಆತನ ಮುಖದಲ್ಲಿ ಆದ ಬದಲಾವಣೆ ನೋಡುವುದು ಅತ್ಯಂತ ಮಧುರ ಕ್ಷಣವಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments