ಕೂದಲು ಉದುರುವ ಸಮಸ್ಯೆಗೆ ಕಾರಣವೇನು ಗೊತ್ತಾ…..?

ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗ್ತವೆ. ಆದ್ರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧವಿದೆ ಎಂಬುದು ನಿಮಗೆ ಗೊತ್ತಾ? ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೂದಲು ರಾಹುವಿಗೆ ಸಂಬಂಧಿಸಿದ್ದು.
ಜಾತಕದಲ್ಲಿ ರಾಹು ಬಲ ಕಳೆದುಕೊಂಡಿದ್ದಲ್ಲಿ ಕೂದಲ ಸಮಸ್ಯೆ ಕಾಡುತ್ತದೆ. ಜಾತಕದಲ್ಲಿ ರಾಹು ಧನು ಅಥವಾ ವೃಶ್ಚಿಕ ರಾಶಿಯಲ್ಲಿದ್ದರೆ ಕೂದಲಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಕೆಲವರ ಕೂದಲು ನೇರವಾಗಿ ನಿಂತಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಹಾಗೂ ರಾಹು ಒಂದೇ ಸ್ಥಾನಕ್ಕೆ ಬಂದ್ರೆ ಹೀಗಾಗುತ್ತದೆಯಂತೆ. ಇಂಥ ಸ್ಥಿತಿಯಲ್ಲಿ ವ್ಯಕ್ತಿ ಅದೃಷ್ಟ ಕೈ ಕೊಡುತ್ತದೆ. ಕೆಲಸದಲ್ಲಿ ಫಲ ಸಿಗುವುದಿಲ್ಲ.
ಮಂಗಳವಾರ ಬಡವರಿಗೆ ಆಹಾರ ನೀಡಿದ್ರೆ ಮಂಗಳ ಗ್ರಹ ಬಲ ಪಡೆಯುತ್ತದೆ. ಮಂಗಳವಾರ ದಾನ ಮಾಡಿದ್ರೂ ಶುಭ ಫಲ ಕಾಣಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಊಟ ಮಾಡುವ ವೇಳೆ ಬಟ್ಟಲಿನಲ್ಲಿ ಕೂದಲು ಸಿಕ್ಕಿದ್ರೆ ಅದು ಶುಭವಲ್ಲ. ಜಾತಕದಲ್ಲಿ ರಾಹು ಬಲ ಕಳೆದುಕೊಂಡಿದ್ದಾನೆಂದರ್ಥ. ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಕೂದಲು ಬೆಳ್ಳಗಾಗುತ್ತದೆ.