Wednesday, August 10, 2022
Google search engine
HomeUncategorizedಕುಡಿದ ಅಮಲಿನಲ್ಲಿ 11 ವರ್ಷಗಳ ಹಿಂದೆ ಮಾಡಿದ್ದ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ…!

ಕುಡಿದ ಅಮಲಿನಲ್ಲಿ 11 ವರ್ಷಗಳ ಹಿಂದೆ ಮಾಡಿದ್ದ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ…!

ಕುಡಿದ ಅಮಲಿನಲ್ಲಿ 11 ವರ್ಷಗಳ ಹಿಂದೆ ಮಾಡಿದ್ದ ಕೊಲೆ ರಹಸ್ಯ ಬಿಚ್ಚಿಟ್ಟ ಆರೋಪಿ…!

ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ತಾನು ಇತರೆ ಇಬ್ಬರ ಜೊತೆ ಸೇರಿ 11 ವರ್ಷಗಳ ಹಿಂದೆ ಮಾಡಿದ್ದ ಕೊಲೆ ರಹಸ್ಯವನ್ನು ಬಹಿರಂಗಪಡಿಸಿದ್ದು, ಇದೀಗ ಎಲ್ಲರೂ ಬಂಧನಕ್ಕೊಳಗಾಗಿದ್ದಾರೆ. ಇಂತಹದೊಂದು ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಪ್ರಕರಣದ ವಿವರ: ಮುದ್ದೇಬಿಹಾಳದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಜಿ. ಪಾಟೀಲ ಎಂಬಾತ 11 ವರ್ಷಗಳ ಹಿಂದೆ ತನ್ನ ಪತ್ನಿ ಪ್ರಿಯಾಂಕಾ ಉರ್ಫ್ ದಾನೇಶ್ವರಿ ಜೊತೆ ಆಂಧ್ರಪ್ರದೇಶದ ಶ್ರೀಶೈಲಕ್ಕೆ ತೆರಳಿದ್ದ ವೇಳೆ ಆಕೆ ನಾಪತ್ತೆಯಾಗಿದ್ದಳು.

ಈ ಕುರಿತು ಪ್ರಕರಣ ದಾಖಲಾಗಿದ್ದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ. ಇತ್ತೀಚಿಗೆ ವಿಜಯಪುರ ಬಾರ್ ನಲ್ಲಿ ಕುಡಿಯುತ್ತಾ ಕುಳಿತಿದ್ದ ಹೆಚ್.ಜಿ. ಪಾಟೀಲ ಅಮಲಿನಲ್ಲಿ ತಾನು ಮಾಡಿದ್ದ ಪತ್ನಿ ಕೊಲೆ ವಿಷಯವನ್ನು ಬಹಿರಂಗಪಡಿಸಿದ್ದಾನೆ.

ಇದನ್ನು ಕೇಳಿಸಿಕೊಂಡ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸಹೋದರ ಎಸ್‌.ಜಿ. ಪಾಟೀಲ್ ಹಾಗೂ ಕಾರ್ ಚಾಲಕ ಉಮೇಶ್ ಕಮಲಾಪುರ ಜೊತೆ ಸೇರಿ ಈ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದೀಗ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments