Wednesday, February 8, 2023
Google search engine
HomeUncategorizedಕಿಸ್‌ ಕೊಡುವಾಗ ಆಯ್ತು ಎಡವಟ್ಟು; ಪ್ರಿಯಕರನ ಕೃತ್ಯದಿಂದ ಯುವತಿಗೆ ಆಪರೇಷನ್

ಕಿಸ್‌ ಕೊಡುವಾಗ ಆಯ್ತು ಎಡವಟ್ಟು; ಪ್ರಿಯಕರನ ಕೃತ್ಯದಿಂದ ಯುವತಿಗೆ ಆಪರೇಷನ್

ಕಿಸ್‌ ಕೊಡುವಾಗ ಆಯ್ತು ಎಡವಟ್ಟು; ಪ್ರಿಯಕರನ ಕೃತ್ಯದಿಂದ ಯುವತಿಗೆ ಆಪರೇಷನ್

ಟರ್ಕಿಶ್ ಮಾಡೆಲ್ ಒಬ್ಬಳ ಬಾಯಿಯನ್ನು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಿದೆ. ಇದಕ್ಕೆ ಕಾರಣ, ಕಿಸ್​. ಕಿಸ್​ ಕೊಡುವಾಗ ಆದ ಎಡವಟ್ಟಿನಿಂದ ಈ ಮಾಡೆಲ್​ ಈಗ ಆಪರೇಷನ್​ಗೆ ಒಳಗಾಗಬೇಕಿದೆ. ಇದನ್ನು ಖುದ್ದು ಈ ಮಾಡೆಲ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಮೊದಲ ಚುಂಬನದ ನಂತರ ಆಪರೇಷನ್​ಗೆ ಒಳಗಾಗಬೇಕಾಯಿತು ಎಂದಿದ್ದಾಳೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಮಾಡೆಲ್​ ಸೆಯ್ಡಾ ತನ್ನ ಪ್ರಿಯಕರನಿಗೆ ಚುಂಬಿಸಿದ್ದಾಳೆ. ಇದು ಅವರ ಮೊದಲ ಚುಂಬನ. ಪ್ರೀತಿಯ ಅಮಲಿನಲ್ಲಿ ಪ್ರಿಯಕರ ಈಕೆಯ ನಾಲಿಗೆಯನ್ನು ಬಲವಾಗಿ ಕಚ್ಚಿದ್ದಾನೆ. ಅದು ಹರಿದು ಹೋಗಿದೆ. ನೋವಿನಿಂದ ಚೀರಿಕೊಂಡ ಈ ಮಾಡೆಲ್​ ಸೆಯ್ಡಾ ಹಾಸಿಗೆಯಿಂದ ನೇರವಾಗಿ ಆಸ್ಪತ್ರೆಗೆ ಹೋಗಿದ್ದಾಳೆ.

ಅಲ್ಲಿಂದಲೇ ತನ್ನ ಅನುಭವವನ್ನು ಹಂಚಿಕೊಂಡಿದ್ದಾಳೆ. 34 ವರ್ಷದ ಈ ಮಾಡೆಲ್​ ವಿಡಿಯೋದಲ್ಲಿ, “ಮುತ್ತಿನ ಸಮಯದಲ್ಲಿ ನಾಲಿಗೆಯನ್ನು ಕಿತ್ತುಕೊಂಡಿರುವುದು ನನಗೆ ಮಾತ್ರವೇ?” ಎಂದು ಪ್ರಶ್ನಿಸಿದ್ದಾಳೆ. ಇನ್​ಸ್ಟಾಗ್ರಾಮ್​ನಲ್ಲಿ ಆರುವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿರುವ ಈಕೆಯ ಪ್ರಶ್ನೆಗೆ ಹಲವರು ಹಲವು ರೀತಿಯಲ್ಲಿ ಪ್ರತಿಕ್ರಿಯೆ ಮಾಡಿದ್ದಾರೆ. ಆಪರೇಷನ್​ ಬಳಿಕ ತಾನು ಈಗ ಆರೋಗ್ಯದಿಂದ ಇದ್ದಿರುವುದಾಗಿ ಮಾಡೆಲ್​ ಹೇಳಿದ್ದಾಳೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments